ಅದಮಾರು ಶ್ರೀ ಪರ್ಯಾಯ ಪುರಪ್ರವೇಶ

blank

ಉಡುಪಿ: ನಗರದ ರಸ್ತೆಯ ಎರಡೂ ಬದಿಗಳಲ್ಲಿ, ಕಟ್ಟಡ, ಅಂಗಡಿ ಮುಂಗಟ್ಟುಗಳ ಎದುರು ನಿಂತು ಭವ್ಯ ಮೆರವಣಿಗೆ ವೀಕ್ಷಿಸುತ್ತಿರುವ ಸಾವಿ ರಾರು ಭಕ್ತರು. ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ ಸಂದೇಶ ಸಾರುವ ಕಲಾತಂಡಗಳು, ವಿದ್ಯಾರ್ಥಿಗಳ ಮೆರವಣಿಗೆ…. ಇದು ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪುರಪ್ರವೇಶದ ದೃಶ್ಯ. ಪರ್ಯಾಯ ಪೀಠಾರೋಹಣ ಮಾಡಲು ದೇಶದ ವಿವಿಧ ಧಾರ್ಮಿಕ ಹಾಗೂ ತೀರ್ಥ ಕ್ಷೇತ್ರಗಳ ಸಂಚಾರ ಮುಗಿಸಿದ ಅದಮಾರು ಶ್ರೀಗಳು ಬುಧವಾರ ನಡಿಗೆಯ ಮೂಲಕ ಪುರಪ್ರವೇಶ ಮಾಡಿದರು. ಅದಮಾರು ಮೂಲಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ, ಮಠದ ಗೌರವ ಸ್ವೀಕರಿಸಿ, ಮಧ್ಯಾಹ್ನ 2.30ಕ್ಕೆ ಜೋಡುಕಟ್ಟೆಗೆ ಆಗಮಿಸಿದರು. ಅದ್ದೂರಿ, ಸಾಂಪ್ರದಾಯಿಕ ಮೆರವಣಿಗೆ ಮೂಲಕ ಸಕಲ ಗೌರವದೊಂದಿಗೆ ಶ್ರೀಗಳನ್ನು ಬರಮಾಡಿಕೊಳ್ಳಲಾಯಿತು. ಶ್ರೀಗಳು ಜೋಡುಕಟ್ಟೆಯಲ್ಲಿ ಧಾರ್ಮಿಕ ವಿಧಿವಿಧಾನ ಪೂರೈಸಿದ ಬಳಿಕ ಪುರಪ್ರವೇಶ ಮೆರವಣಿಗೆಗೆ ಚಾಲನೆ ದೊರೆಯಿತು.

ಮೆರವಣಿಗೆಯಲ್ಲಿ ಕರಾವಳಿಯ ಜಾನಪದ, ಸಾಂಸ್ಕೃತಿಕ ವೈಭವ ಸಾರುವ ಕಲಾತಂಡಗಳು ಭಾಗವಹಿಸಿದ್ದವು. ಅದಮಾರು ಶಿಕ್ಷಣ ಪ್ರತಿಷ್ಠಾನದ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳೇ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇತರೆ ಕಲಾತಂಡಗಳು ಸೀಮಿತ ಸಂಖ್ಯೆಯಲ್ಲಿದ್ದವು. ಪರಿಸರ ಜಾಗೃತಿ, ಮಳೆ ನೀರು ಕೊಯ್ಲು ಸಂದೇಶವನ್ನು ಮೆರವಣಿಗೆಯಲ್ಲಿ ಸಾರಲಾಯಿತು. ವಿವಿಧ ಸಾಂಸ್ಕೃತಿಕ ಕಲಾವೈಭವದೊಂದಿಗೆ ಮೆರವಣಿಗೆ ಗಮನ ಸೆಳೆಯಿತು. ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ತಂಡೋಪತಂಡವಾಗಿ ಪುರಪ್ರವೇಶದ ಮೆರವಣಿಗೆಯಲ್ಲಿ ಗಮನ ಸೆಳೆದರು. ಭಾವಿ ಪರ್ಯಾಯ ಶ್ರೀಗಳು ಮೆರವಣಿಗೆಯ ಹಿಂದಿನಿಂದ ನಡೆದುಕೊಂಡೇ ಸಾಗಿದರು. ಜೋಡುಕಟ್ಟೆಯಿಂದ, ಡಯಾನಾ ವೃತ್ತ, ತೆಂಕಪೇಟೆ ಮಾರ್ಗವಾಗಿ ರಥಬೀದಿ ಪ್ರವೇಶಿಸಿದರು. ಮೆರವಣಿಗೆ ಉದ್ದಕ್ಕೂ ಭಕ್ತರು ಶ್ರೀಗಳಿಗೆ ಪೂಜೆ ಸಲ್ಲಿಸಿ, ಫಲತಾಂಬೂಲ ನೀಡಿದರು. ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ ಸಾವಿರಾರು ಜನರು ನೆರೆದಿದ್ದರು.
ಅದಮಾರು ಮೂಲ ಮಠದಿಂದ ಜೋಡುಕಟ್ಟೆಗೆ ಪಟ್ಟದ ದೇವರಾದ ಕಾಳಿಂಗ ಮರ್ಧನ ದೇವರೊಂದಿಗೆ ಶ್ರೀಗಳು ಶಿಷ್ಯರೊಂದಿಗೆ ಆಗಮಿಸಿದರು. ಶ್ರೀಗಳನ್ನು ಭಕ್ತರು, ಜನಪ್ರತಿನಿಧಿಗಳು ಬರ ಮಾಡಿಕೊಂಡರು. ಜೋಡುಕಟ್ಟೆಯಲ್ಲಿ ಶ್ರೀಗಳು ಪಟ್ಟದ ದೇವರಿಗೆ ಆರತಿ ಬೆಳಗಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ವೇಳೆ ಪಟ್ಟದ ದೇವರನ್ನು ಪಲ್ಲಕ್ಲಿಯಲ್ಲಿರಿಸಲಾಗಿತ್ತು.
ರಥಬೀದಿ ಪ್ರವೇಶಿಸಿದ ಭಾವಿ ಪರ್ಯಾಯ ಅದಮರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಕನಕ ಕಿಂಡಿಯಲ್ಲಿ ಕೃಷ್ಣ ದೇವರ ದರ್ಶನ ಮಾಡಿದರು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ದರ್ಶನ ಮಾಡಿದರು. ಕೃಷ್ಣಮಠ ಮುಖ್ಯದ್ವಾರದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅದಮಾರು ಶ್ರೀಗಳನ್ನು ಸ್ವಾಗತಿಸಿದರು.

ಗಣ್ಯರ ಉಪಸ್ಥಿತಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ, ವಿ.ಸೋಮಣ್ಣ. ಆರ್.ಅಶೋಕ್, ಶಾಸಕ ಕೆ.ರಘುಪತಿ ಭಟ್, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಕೃಷ್ಣಸೇವಾ ಬಳಗದ ಪ್ರಮುಖರಾದ ಎಂ.ಬಿ ಪುರಾಣಿಕ್, ಗೋವಿಂದ್‌ರಾಜ್, ದಿನೇಶ್ ಪುತ್ರನ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪ ವಿಭಾ ಗ ಅಧಿಕಾರಿ ರಾಜು, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಪಾಲ್ಗೊಂಡಿದ್ದರು.


Share This Article

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…

ಜಗತ್ತಿನ ಈ 5 ಜನರ ಮುಂದೆ ಯಾವಾಗಲೂ ಮೌನವಾಗಿರಬೇಕಂತೆ! ಚಾಣಕ್ಯ ನೀತಿ ಬಗ್ಗೆ ತಿಳಿಯಿರಿ | Chanakya Niti

Chanakya Niti : ಚಾಣಕ್ಯ ಎಂದ ಕ್ಷಣ ಕಣ್ಣ ಮುಂದೆ ಬರುವುದೆ ಚಾಣಕ್ಷ್ಯತನ, ಬುದ್ಧಿವಂತಿಕೆ. ಹಾಗಾಗಿ,…