ಅಥಣಿ: ಮಾ.4ರಂದು ಶರಣ ಸಂಸ್ಕೃತಿ ಉತ್ಸವದಲ್ಲಿ ಕಾರ್ಯಕ್ರಮ

ಅಥಣಿ: ಇಲ್ಲಿನ ಗಚ್ಚಿನಮಠದಲ್ಲಿ ಜರುಗಲಿರುವ ಮಹಾಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ಸೋಮವಾರ ಬೆಳಗ್ಗೆ 7.30ಕ್ಕೆ ಸಹಜ ಶಿವಯೋಗ ಮಹಾಶಿವರಾತ್ರಿಯ ಪ್ರಯುಕ್ತ ಲಿಂಗಪೂಜೆಯ ಪ್ರಾತ್ಯಕ್ಷಿಕೆ ಡಾ.ಶಿವಮೂರ್ತಿ ಮುರುಘಾ ಶರಣರಿಂದ ಜರುಗಲಿದೆ.ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ನದಿಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿ, ಹಲ್ಯಾಳದ ಗುರುಸಿದ್ದ ಸ್ವಾಮೀಜಿ, ತೆಲಸಂಗದ ವೀರೇಶ ದೇವರು ಪಾಲ್ಗೊಳ್ಳುವರು.

ಮುಖ್ಯ ಅತಿಥಿಗಳಾಗಿ ವಜ್ರಕಾಂತ ಸದಲಗಿ, ಎಸ್.ಎಂ.ನಾಯಿಕ, ಅರುಣಕುಮಾರ, ಮೃತ್ಯುಂಜಯ ಹಿರೇಮಠ, ರವಿಕುಮಾರ ಕಗ್ಗಣ್ಣವರ, ಶಿವು ಗೆಜ್ಜಿ, ದಿಲೀಪ ಕಾಂಬಳೆ, ಡಾ.ಎಂ.ಜಿ.ಹಂಜಿ, ಡಾ.ರುದ್ರಪ್ಪನಾಯಕ ಹಿಂಚಲ, ಎ.ಎಂ.ಖೊಬ್ರಿ ಉಪಸ್ಥಿತರಿರುವರು. ನಂತರ 9 ಗಂಟೆಗೆ ಬಸವಧರ್ಮ ಧ್ವಜಾರೋಹಣ, ಮುರುಘೇಂದ್ರ ಶಿವಯೋಗಿಗಳ ಭಾವಚಿತ್ರ ಮತ್ತು ಬಸವಣ್ಣವರ ವಚನ ಗ್ರಂಥದ ಪಲ್ಲಕ್ಕಿ ಉತ್ಸವ ಹಾಗೂ ವ್ಯಾಸನತೋಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಲಿದೆ. ಮಧ್ಯಾಹ್ನ 12.ಗಂಟೆಗೆ ಮಹಾಶಿವರಾತ್ರಿಯ ಶಿವಯೋಗ ಸಾಮೂಹಿಕ ಲಿಂಗಪೂಜೆ ಹಾಗೂ ಮಹಾದಾಸೋಹ ನಡೆಯಲಿದೆ.

ಸಂಜೆ 6ಗಂಟೆಗೆ ಬದುಕು ಮತ್ತು ಅನಾವರಣ ಎಂಬ ವಿಷಯದ ಕುರಿತು ಚಿಂತನಗೋಷ್ಠಿ ಜರುಗಲಿದೆ.ಡಾ.ಶಿವಮೂರ್ತಿ ಮುರುಘಾಶರಣರು, ಧಾರವಾಡ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಕೃಷ್ಣಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಚಂದ್ರಶೇಖರ ಗಾಣಿಗೇರ, ಎಚ್.ಎಸ್.ವೆಂಕಟೇಶ, ಅಮರ ದುರ್ಗಣ್ಣವರ, ಡಾ.ಕೆ.ಎಂ.ಸುರೇಶ, ರವಿಕುಮಾರ ಪಟ್ಟಣಶೆಟ್ಟಿ, ಶಂಕರಗುರು ಶಿಕ್ಕಲಗಾರ ಮತ್ತು ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರಿಂದ ಉಪನ್ಯಾಸ ಜರುಗಲಿದೆ. ಸರಿಗಮಪ ವಿಜೇತ ಚನ್ನಪ್ಪ ಹುದ್ದಾರ, ವಿಶ್ವಪ್ರಸಾದ ಗಾಣಿಗ, ಅಖಲಿ ಫಜಮಣ್ಣು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ರಾತ್ರಿ 10 ಗಂಟೆಗೆ ಮಹಾಶಿವರಾತ್ರಿ ಸಂಗೀತ ಸಂಭ್ರಮ ಶಿವಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅಹೋರಾತ್ರಿ ನಡೆಯಲಿದೆ.