ಹಗರಿಬೊಮ್ಮನಹಳ್ಳಿ: ತಾಲೂಕು ಆಡಳಿತ ಸೌಧದಲ್ಲಿ ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.
ಮರಾಠ ಸಮಾಜದ ಅಧ್ಯಕ್ಷ ಅವಿನಾಶ್ ಜಾಧವ್ ಮಾತನಾಡಿ, ಯುವಕರಿಗೆ ಆದರ್ಶವಾಗಿರುವ ಶಿವಾಜಿ ಮಹಾರಾಜರು ಅತ್ಯಂತ ಧೈರ್ಯಶಾಲಿಯಾಗಿದ್ದರು. ಶಿವಾಜಿ ಮಹಾರಾಜರ ಜೀವನಗಾಥೆ ಅಧ್ಯಯನ ಮಾಡಿದರೆ ದೇಶಭಕ್ತಿ, ಭಾರತ ನೆಲದ ಮೇಲಿನ ಪ್ರೀತಿ ಇನ್ನೂ ಹೆಚ್ಚುತ್ತದೆ ಎಂದು ಹೇಳಿದರು.
ತಹಸೀಲ್ದಾರ್ ಆರ್.ಕವಿತಾ ಮಾತನಾಡಿ, ಛತ್ರಪತಿ ಶಿವಾಜಿ ಅವರು ತಮ್ಮ ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಶಿವಾಜಿ ಮಹಾರಾಜರು ಬುದ್ಧಿವಂತರೆನ್ನುವುದಕ್ಕೆ ಅವರ ಆಡಳಿತ ವೈಖರಿ ಪ್ರಮುಖ ಸಾಕ್ಷಿಯಾಗಿದೆ ಎಂದರು.
ಉಪತಹಸೀಲ್ದಾರ್ ಶಿವಕುಮಾರ ಗೌಡ, ಸಂತೋಷ್ ಪೂಜಾರ್, ಪರಶುರಾಮ ದಲಬಂಜನ್, ಚಿಂತ್ರಪಳ್ಳಿ ನಾಗರಾಜ, ಭಜರಂಗದಳದ ಸಂಪತ್, ಮೂರ್ತಿ, ನಾಗಭೂಷಣ ಗದ್ದಿಕೆರೆ, ಚಿರಂಜೀವಿ, ಟಿ.ಭರತ್, ಬ್ಯಾಟಿ ಸಂದೀಪ, ತಾಲೂಕು ಆಡಳಿತದ ಅಧಿಕಾರಿಗಳು ಸಿಬ್ಬಂದಿ ಇದ್ದರು.