More

  ಅತ್ತೀಮುರುಡು ಗ್ರಾಮಸ್ಥರ ಮನವೊಲಿಸಿದ ತಹಸೀಲ್ದಾರ್

  ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾಪಂ ವ್ಯಾಪ್ತಿಯ ಅತ್ತೀಮುರುಡು ಗ್ರಾಮದ ಮತದಾರರು ಗ್ರಾಪಂ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಹಸೀಲ್ದಾರ್​ಗೆ ಇತ್ತೀಚೆಗೆ ಮನವಿ ನೀಡಿದ್ದರು. ಹೀಗಾಗಿ ತಹಸೀಲ್ದಾರ್ ಮಂಜುಳಾ ಎಸ್. .ಭಜಂತ್ರಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಮತದಾರರ ಅಹವಾಲು ಸ್ವೀಕರಿಸಿ, ಮತದಾನ ಮಾಡುವಂತೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

  ಗ್ರಾಮದ ವಿಶ್ವೇಶ್ವರ ಹೆಗಡೆ ಅತ್ತೀಮುರಡು, ನರೇಂದ್ರ ಹೆಗಡೆ, ಸಂತೋಷ ಹೆಗಡೆ, ಗಣೇಶ ಹೆಗಡೆ, ಶ್ರೀಪಾದ ಹೆಗಡೆ ಮತ್ತಿತರ ಜತೆಗೆ ರ್ಚಚಿಸಿದರು. ಗ್ರಾಮ ಪಂಚಾಯಿತಿಯಿಂದ ಆಗಬಹುದಾದ ಕಾಮಗಾರಿ, ಮುಖ್ಯವಾಗಿ ಬಾಂದಾರ, ಕಾಲು ಸಂಕ ನಿರ್ವಣ, ಸರ್ವಋತು ರಸ್ತೆಯ ದುರಸ್ತಿ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದು ಸಮಂಜಸವಲ್ಲ ಎಂದು ಮನವರಿಕೆ ಮಾಡಿದರು. ಹೀಗಾಗಿ ಗ್ರಾಮಸ್ಥರು ಮತದಾನ ಮಾಡಲು ಸಮ್ಮತಿ ಸೂಚಿಸಿದರು ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ತಿಳಿಸಿದ್ದಾರೆ. ಈ ವೇಳೆ ತಾಪಂ ಯೋಜನಾಧಿಕಾರಿ ಎನ್.ಆರ್. ಹೆಗಡೆಕರ್, ಪಿಡಿಒ ಸುಬ್ರಹ್ಮಣ್ಯ ಹೆಗಡೆ, ಕಂದಾಯ ಅಧಿಕಾರಿಗಳು ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts