ಚಿತ್ರದುರ್ಗ: ರೋಮಾಂಚನಗೊಳಿಸುವ ವಾಹನಗಳ ಅತಿಯಾದ ವೇಗ ಸಾವಿಗೆ ದಾರಿ ಮಾಡುತ್ತದೆ ಎಂದು ಎಂಎಸ್‌ವಿ ಇಂಟರ್ ನ್ಯಾಷನಲ್ ಐಎನ್‌ಸಿ/ ಎನ್‌ಎಚ್‌ಎಐ ಇಂಟಿನಿಯರ್ ಶಿವಕುಮಾರ್ ನಲ್ಲಪ್ಪರೆಡ್ಡಿ ಹೇಳಿದರು.
ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಏರ್ಪಡಿಸಿದ್ದ ‘ರಸ್ತೆ ಸುರಕ್ಷತೆ’ಉಪನ್ಯಾಸ ಕಾರ‌್ಯಕ್ರಮದಲ್ಲಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಮೋಟಾರು ದ್ವಿಚಕ್ರ ವಾಹನಗಳು ಅಪಘಾತಗಳಿಗೆ ಗುರಿಯಾಗುತ್ತಿವೆ. ವಾಹನಗಳನ್ನು ಚಲಾಯಿಸುವಾಗ ಮೊಬೈಲ್ ಬಳಕೆ,ಮದ್ಯಪಾನ ಮಾಡಿ ವಾಹನ ನಡೆಸುವುದು ಸರಿಯಲ್ಲ. ಕಾರಿನಲ್ಲಿ ಸೀಟ್ ಬೆಲ್ಟ್ ಕಡ್ಡಾಯ ಧ ರಿಸಬೇಕು. ಬಸ್ ಹಾಗೂ ಕಾರುಗಳಲ್ಲಿ ಪ್ರಯಾಣಿಸುವಾಗ ಕೈ ಮತ್ತು ತಲೆಯನ್ನು ಹೊರ ಚಾಚಬಾರದು. ಮೋಟಾರು ದ್ವಿಚಕ್ರ ವಾಹನ ಸವಾರಿ ವೇಳೆ ಹೆಲ್ಮೆಟ್ ಧರಿಸಬೇಕು. ರಸ್ತೆ ಸುರಕ್ಷತೆ ಕ್ರಮಗಳನ್ನು ಪಾಲಿಸಿದರೆ ಅಪಘಾತಗಳು,ಸಾವು-ನೋವುಗಳ ಸಂಖ್ಯೆಯನ್ನು ಕಡಿಮೆ ಮಾಡ ಬಹುದೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಮಾತನಾಡಿ,ರಸ್ತೆ ಸುರಕ್ಷತೆಯ ಅರಿವಿನ ಕೊರತೆಯಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಜನರಲ್ಲಿ ಜಾಗೃತಿ ಮೂಡಿಸ ಬೇಕಿದೆ ಎಂದರು. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ಶ್ರೀಶೈಲ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಸ್.ಪಿ.ಶಿವಕುಮಾರ್,ಐಕ್ಯೂಎಸಿ ಸಂಚಾಲಕ ಡಾ.ಎ.ಎಂ.ರಾಜೇಶ್,ಡೀನ್ ಅಕಾಡೆಮಿಕ್ ಡಾ.ಎಸ್.ಸಿ.ಮಂಜುನಾಥ್,ಪ್ರೊ.ಜಿ.ಎ.ನಿಖಿತಾ ಇದ್ದರು. ಜಿ.ಎಸ್.ಸಂಜನಾಗೌಡ ಪ್ರಾರ್ಥಿಸಿದರು. ಎನ್.ಪವನ್‌ಕುಮಾರ್ ಸ್ವಾಗತಿಸಿ,ಬಿ.ಆರ್.ಸ್ಪಂದನಾ ವಂದಿಸಿದರು. ಡಿ.ಸಿ.ರುಕ್ಮಿಣಿ ನಿರೂಪಿಸಿದರು.
—-
