More

  ಅತಿಥಿ ಉಪನ್ಯಾಸಕಿಯನ್ನೇ ಮುಂದುವರಿಸಿ

  ಬೆಳಗಾವಿ: ಇಲ್ಲಿನ ಶಹಾಪುರದ ಪಂಡಿತ ನೆಹರು ಪದವಿಪೂರ್ವ ವಿದ್ಯಾಲಯಕ್ಕೆ ನಿಯೋಜನೆಗೊಂಡಿರುವ ಉಪನ್ಯಾಸಕರನ್ನು ಬದಲಾಯಿಸಬೇಕು. ಮೊದಲಿದ್ದ ಅತಿಥಿ ಉಪನ್ಯಾಸಕಿಯನ್ನೇ ಮುಂದುವರಿಸುವಂತೆ ಆಗ್ರಹಿಸಿ ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

  ಹಲವು ವರ್ಷಗಳಿಂದ ಪಂಡಿತ ನೆಹರು ಪದವಿ ಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಧನಶ್ರೀ ಗಾರಡೆ ಸೇವೆ ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿದ್ದರು. ಇದೀಗ ಸರ್ಕಾರವು ಏಕಾಏಕಿ ಅವರ ಸ್ಥಾನಕ್ಕೆ ಬೇರೆ ಉಪನ್ಯಾಸಕರನ್ನು ನಿಯೋಜನೆ ಮಾಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

  ಧನಶ್ರೀ ಅವರು ವಿದ್ಯಾರ್ಥಿಗಳು ಕಾಲೇಜಿಗೆ ಬಾರದಿದ್ದರೆ ಅವರೇ ಮನೆಗೆ ಹೋಗಿ ಕರೆದುಕೊಂಡು ಬರುತ್ತಿದ್ದರು. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ನಿರಂತರವಾಗಿ ಶ್ರಮ ವಹಿಸುತ್ತಿದ್ದರು. ಇದರಿಂದಾಗಿ ಈ ವರ್ಷ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿತ್ತು. ಕೂಡಲೇ ಅವರನ್ನೇ ಸೇವೆಯಲ್ಲಿ ಮುಂದುವರಿಸಬೇಕು. ಇಲ್ಲದಿದ್ದರೆ ತರಗತಿಗೆ ಬಹಿಷ್ಕಾರ ಹಾಕಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು.
  ಶ್ರೇಯಸ್‌ಕುಂಡೇಕರ್, ವಾಟಿಕಾ ಖನ್ನೂಕರ್, ವೈಷ್ಣವಿ ಬೆನ್ನಾಳ್ಕರ್, ಸ್ಮಿತಾ ಪಾಟೀಲ, ಆವಂತಿಕಾ ಝಂಗರೂಚೆ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts