ಅತಿಕ್ರಮಣ ಸಕ್ರಮ ಜಂಟಿ ಸರ್ವೆಗೆ ಆದೇಶ

Latest News

ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಸ್ತವ್ಯ ಹೂಡಿದ ಶಾಲೆಯಲ್ಲಿ ಶಿಕ್ಷಕರಿಂದ ಮಹಾ ಪ್ರಮಾದ

ಚಾಮರಾಜನಗರ: ಸಚಿವರ ಬಳಕೆಗೆಂದು ಮೀಸಲಿಟ್ಟ ಶೌಚಗೃಹವನ್ನು ಶಾಲಾ ಮಕ್ಕಳ ಕೈಯಲ್ಲಿ ಸ್ವಚ್ಛಗೊಳಿಸುವ ಮೂಲಕ ಶಾಲಾ ಶಿಕ್ಷಕರು ಪ್ರಮಾದವೆಸಗಿರುವ ಘಟನೆ ರಾಜ್ಯದ ಗಡಿಭಾಗದ ಶಾಲೆಯೊಂದರಲ್ಲಿ...

ರಾಷ್ಟ್ರ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಡುವ ಧೀರ ಯೋಧರಿಗಾಗಿ “ಐರನ್​ ಮ್ಯಾನ್​” ಉಡುಪು ಅಭಿವೃದ್ಧಿಪಡಿಸಿದ ಯುವಕ!

ವಾರಾಣಸಿ: ಹಾಲಿವುಡ್​ ಐರನ್​ ಮ್ಯಾನ್​ ಚಿತ್ರದಿಂದ ಸ್ಪೂರ್ತಿಗೊಂಡು ವಾರಾಣಸಿಯ ಖಾಸಗಿ ವಿಶ್ವವಿದ್ಯಾಲಯದ ಉದ್ಯೋಗಿಯೊಬ್ಬರು "ಐರನ್​ ಮ್ಯಾನ್​" ಉಡುಪನ್ನು ಅಭಿವೃದ್ಧಿಪಡಿಸಿ ಸುದ್ದಿಯಾಗಿದ್ದಾರೆ. ಎದುರಾಳಿಯೊಂದಿಗೆ ಸೆಣಸಾಡುವ...

ಐಟಿ-ಬಿಟಿ ಅಭಿವೃದ್ಧಿಗೆ ಸರ್ಕಾರದ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ, ಬೆಂಗಳೂರು ಟೆಕ್ ಸಮಿಟ್​ಗೆ ಅದ್ದೂರಿ ಚಾಲನೆ

ಬೆಂಗಳೂರು: ಆವಿಷ್ಕಾರ, ಸೇವಾ ಕ್ಷೇತ್ರಗಳ ಜತೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ....

ಬಿಐಎಸ್ ವರದಿ ಆತಂಕಕಾರಿ: ಜಲಮಂಡಳಿಗೆ ತಜ್ಞರ ಸಲಹೆ, ಗುಣಮಟ್ಟದ ನೀರಿಗೆ ನಾಗರಿಕರ ಆಗ್ರಹ

ಬೆಂಗಳೂರು: ಬೆಂಗಳೂರು ಜಲಮಂಡಳಿ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಶುದ್ಧವಲ್ಲ ಎಂಬುದು ಭಾರತೀಯ ಗುಣಮಟ್ಟ ಸಂಸ್ಥೆ (ಬಿಐಎಸ್) ನಡೆಸಿದ ಅಧ್ಯಯನದಲ್ಲಿ ಬಯಲಾಗಿದೆ. ಇದು...

ವೈದ್ಯರಿಂದ ಮಾತೃಹೃದಯದ ಸೇವೆ

ಬೆಳ್ತಂಗಡಿ: ವೈದ್ಯರು ಮಾನವೀಯತೆ ಹಾಗೂ ನಗುಮುಖದ ಮಾತೃ ಹೃದಯದೊಂದಿಗೆ ರೋಗಿಗಳ ಸೇವೆ ಮಾಡಬೇಕು. ರೋಗಿಗಳ ಸೇವೆಯೇ ದೇವರ ಸೇವೆಯಾಗಿದೆ ಎಂದು ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ...

ಕಾರವಾರ: 1980ರ ಪೂರ್ವದ ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಸಂಬಂಧಿಸಿದಂತೆ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆಗೆ ಆದೇಶಿಸಲಾಗಿದೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 1980ರ ಪೂರ್ವದಲ್ಲಿ ಅತಿಕ್ರಮಣ ಮಾಡಿದವರಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ, ಆರ್​ಟಿಸಿಯಲ್ಲಿ ಅವರ ಹೆಸರು ನಮೂದಾಗಿಲ್ಲ. ಪಟ್ಟಾ ನೀಡಿದ ಜಮೀನನ್ನು ಡಿ ಫಾರೆಸ್ಟ್ ಮಾಡುವ ಕಡತಗಳು ದಶಕಗಳಿಂದ ಬಾಕಿ ಇವೆ. ಅತಿಕ್ರಮಣದಾರರಿಗೆ ಭೂಮಿಯ ಹಕ್ಕು ದೊರಕಿಸಿಕೊಡಲು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳು ಜಂಟಿ ಸರ್ವೆ ಕಾರ್ಯ ಆರಂಭಿಸಿವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಶೀಘ್ರ ಈ ಕಾರ್ಯ ನಡೆಸಲಾಗುವುದು ಎಂದು ಅವರು ಹೇಳಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಬಂದ ಪರಿಶಿಷ್ಟ ಪಂಗಡದವರ, ಹಾಗೂ ಸಾಮುದಾಯದ ಹಕ್ಕಿನ ಬಹುತೇಕ ಅರ್ಜಿಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ, ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡಲಾಗದ ಬಗೆಗೆ ಬೇಸರವಿದೆ. 75 ವರ್ಷ ಭೂಮಿಯಲ್ಲಿ ವಾಸವಿರಬೇಕು ಎಂಬ ನಿಯಮ ಸಡಿಲಿಕೆಗೆ ಹಲವು ಪತ್ರ ಬರೆದರೂ ಸಾಧ್ಯವಾಗಿಲ್ಲ ಎಂದರು.

ನೌಕಾನೆಲೆಯ ಎರಡನೇ ಹಂತದ ಕಾಮಗಾರಿಯ ಭಾಗವಾಗಿ ವಿಮಾನ ನಿಲ್ದಾಣ ಸಿದ್ಧವಾಗುತ್ತಿದೆ. ಅದರಲ್ಲಿ ನಾಗರಿಕ ವಿಮಾನಯಾನಕ್ಕೂ ಅವಕಾಶ ನೀಡುವಂತೆ ಮನವಿ ಮಾಡಲಾಗಿತ್ತು. ರನ್​ವೇ ನಿರ್ವಣಕ್ಕಾಗಿ ಹೆಚ್ಚುವರಿ ಭೂಮಿ ನೀಡುವಂತೆ ರಕ್ಷಣಾ ಇಲಾಖೆ ಬೇಡಿಕೆ ಇಟ್ಟಿದೆ. ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆಯುವ ಬಗೆಗೆ ಚಿಂತಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಅಗತ್ಯ ಬಿದ್ದಲ್ಲಿ ಅತಿ ಕಡಿಮೆ ಪ್ರಮಾಣದ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುವುದು ಎಂದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಪಂ ಅಧ್ಯಕ್ಷೆ ಪ್ರಮಿಳಾ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ಎಂ.ರೋಶನ್, ಎಸ್​ಪಿ ವಿನಾಯಕ ಪಾಟೀಲ ವೇದಿಕೆಯಲ್ಲಿದ್ದರು.

ಆಕರ್ಷಕ ಪಥ ಸಂಚಲನ: ಧ್ವಜಾರೋಹಣದ ನಂತರ ಸಚಿವ ಆರ್.ವಿ.ದೇಶಪಾಂಡೆ ತೆರೆದ ಜೀಪ್​ನಲ್ಲಿ ತುಕಡಿಗಳನ್ನು ವೀಕ್ಷಿಸಿದರು. ನಂತರ ಪೊಲೀಸ್, ಗೃಹರಕ್ಷಕ, ಹಾಗೂ ವಿವಿಧ ಶಾಲೆಗಳ ಎನ್​ಸಿಸಿ ಸೇರಿ 17 ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್​ಪಿಐ ಸಚಿನ್ ಲಾರೆನ್ಸ್ ಪಥಸಂಚಲನದ ನೇತೃತ್ವ ವಹಿಸಿದ್ದರು. ಸೇಂಟ್ ಜೋಸೆಫ್ಸ್ ಹೈಸ್ಕೂಲ್​ನ ಎನ್​ಸಿಸಿ ಘಟಕ ಮೊದಲ, ಸರ್ಕಾರಿ ಕ್ರೀಡಾ ವಸತಿ ಶಾಲೆಯ ತಂಡ ಎರಡನೇ ಸ್ಥಾನವನ್ನು ಪಥ ಸಂಚಲನದಲ್ಲಿ ಪಡೆಯಿತು.

- Advertisement -

Stay connected

278,592FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO: ಗೋಕಾಕ್​ ಕ್ಷೇತ್ರದಲ್ಲಿ...

ಗೋಕಾಕ್​: ಡಿಸೆಂಬರ್​ 5ಕ್ಕೆ ಉಪಚುನಾವಣೆ ನಡೆಯಲಿದ್ದು ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಬಹುತೇಕ ಅನರ್ಹರೆಲ್ಲ ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇವತ್ತು ಕುತೂಹಲ ಮೂಡಿಸಿದ್ದು ಗೋಕಾಕ್​ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ರಮೇಶ್​...

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...