ತಾಳಗುಪ್ಪ: ತೋಟಗಾರಿಕಾ ಬೆಳೆಯಾದ ಅಡಕೆ ಇತ್ತೀಚಿನ ವರ್ಷಗಳಲ್ಲಿ ಬೆಲೆಯ ಕಾರಣದಿಂದ ಲಾಭದಾಯಕವಾಗಿದೆ. ಆದರೆ ಬೆಲೆ ಉತ್ತಮವಾಗಿದ್ದರೂ ಬೆಳೆ ಉಳಿಸಿಕೊಳ್ಳಲಾಗದೆ ರೈತರು ಹೈರಾಣಾಗುತ್ತಿದ್ದಾರೆ. ಚಿಗುರು ಅಡಕೆಯನ್ನು ಬಿಳಿ ಮಂಗಗಳು ಚೀಪಿ ಎಸೆಯುವುದು ಒಂದು ಕಾಟವಾದರೆ ಅಡಕೆ ಕೊಳೆರೋಗ ಮತ್ತೊಂದು ಕಾಟ. ಇತ್ತೀಚೆಗೆ ವ್ಯಾಪಕವಾಗಿ ಹರಡುತ್ತಿರುವ ಎಲೆಚುಕ್ಕೆ ರೋಗ ಮರಗಳನ್ನೇ ಬಲಿ ತೆಗೆದುಕೊಳ್ಳುತ್ತಿದೆ. ಇವೆಲ್ಲದರ ಜತೆಗೆ ಈ ವರ್ಷದಿಂದ ಬೆಳೆದ ಹಸಿ ಅಡಕೆಗೆ ಕ್ಯಾಸ್ವಾಳ (ಕೆಂದಳಿಲು) ಎಂಬ ಜೀವಿ ವ್ಯಾಪಕ ಹಾನಿ ಮಾಡುತ್ತಿದೆ.
ತಾಳಗುಪ್ಪದ ಸಮೀಪ ಹಿರೇಮನೆಯ ಮಧುಕರ ಮರಿ ಅವರ ತೋಟದಲ್ಲಿ ಎರಡು ಕ್ವಿಂಟಾಲ್ ಗೂ ಹೆಚ್ಚು ಅಡಕೆಯನ್ನು ಕಚ್ಚಿ ಕ್ಯಾಸ್ವಾಳ ಎಸೆದಿದೆ. ಈ ಅಡಕೆಯಲ್ಲಿರುವ ಸಿಹಿ ಅಂಶವನ್ನು ಗುರುತಿಸಿ ಕ್ಯಾಸ್ವಾಳ ಅಡಕೆಗೆ ಲಗ್ಗೆಯಿಟ್ಟಿದೆ. ಒಂದು ಕ್ಯಾಸ್ವಾಳ ಕನಿಷ್ಠ ಐದು ಅಡಕೆ ಗೊನೆಗಳನ್ನು ಪ್ರತಿದಿನ ನಾಶ ಮಾಡಬಲ್ಲದು. ಇದನ್ನು ಕಾಯುವುದೂ ಕಷ್ಟಕರ, ಮಂಗಗಳಂತೆ ಇವು ಗುಂಪಾಗಿ ಬರುವುದಿಲ್ಲ, ಒಂಟಿಯಾಗಿ ಸುತ್ತುವ ಇವು ಮರದಲ್ಲಿ ಅಡಗಿ ಕುಳಿತಿರುವುದು ಪತ್ತೆ ಮಾಡುವುದು ತುಂಬ ಕಷ್ಟ ಎನ್ನುತ್ತಾರೆ ರೈತರು.
ಅಡಕೆಗೆ ಮಂಗನ ಜತೆ ಕ್ಯಾಸ್ವಾಳ ಕಾಟ!

You Might Also Like
ಬೇಸಿಗೆಯ ಆರೋಗ್ಯಕ್ಕಾಗಿ ಇವುಗಳಿಗೆ ವಿದಾಯ ಹೇಳಿ! ಇಲ್ಲದಿದ್ದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ Summer Foods
Summer Foods : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದ್ದರಿಂದ ದೇಹವನ್ನು…
ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನೆಯ ಶಾಂತಿ, ನೆಮ್ಮದಿ ಕೆಡಿಸುತ್ತವೆ! ಹುಷಾರ್…Vastu Tips
Vastu Tips: ನಮ್ಮ ದೈನಂದಿನ ಅಭ್ಯಾಸಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಹ ನಮ್ಮ ಮನೆಯ ವಾಸ್ತುಗೆ…
ರಾತ್ರಿ ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಇಂದೇ ಈ ಅಭ್ಯಾಸ ಬಿಟ್ಟು ಬಿಡಿ.. Sleeping Disorder
Sleeping Disorder : ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೆಲವರಿಗೆ ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಇರುತ್ತದೆ.…