ಅಜಿತಾಬ್ ನಾಪತ್ತೆ ಕೇಸ್ ಸಿಬಿಐಗೆ

ಬೆಂಗಳೂರು: ಕಳೆದ ಡಿಸೆಂಬರ್​ನಿಂದಲೂ ಭೇದಿಸಲಾಗದ ಸಾಫ್ಟ್ ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ರಾಜ್ಯ ವಿಶೇಷ ತನಿಖಾ ತಂಡದಿಂದ (ಎಸ್​ಐಟಿ) ಸಿಬಿಐಗೆ ವರ್ಗಾಯಿಸಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ, ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದೆ.

ರಾಜ್ಯ ಪೊಲೀಸರ ತನಿಖೆಯಲ್ಲಿ ಕೊರತೆಗಳಿವೆ ಅಥವಾ ತನಿಖಾ ಸಂಸ್ಥೆ ನಿಷ್ಕ್ರಿಯತೆಯಿಂದ ಕೂಡಿದೆ ಎಂಬ ಕಾರಣದಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುತ್ತಿಲ್ಲ. ಬದಲಾಗಿ ಈವರೆಗಿನ ತನಿಖೆಯಿಂದ ಈ ಪ್ರಕರಣ ಸಂಬಂಧ ದೇಶದ ವಿವಿಧೆಡೆಯಲ್ಲಿ ಹಲವು ಸುಳಿವು ದೊರೆತಿವೆ. ಹೀಗಾಗಿ, ಹೊರ ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳು ಹಾಗೂ ತನಿಖಾ ವಿಭಾಗಗಳ ನಡುವಿನ ಉತ್ತಮ ಸಮನ್ವಯತೆಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಸೂಕ್ತವಾಗಿದೆ

ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣವನ್ನು ರ್ತಾಕ ಅಂತ್ಯ ಕಾಣಿಸುವ ನಿಟ್ಟಿನಲ್ಲಿ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಸಹಕಾರ ಪಡೆಯಲು ಮತ್ತು ಎಲ್ಲ ಸುಳಿವುಗಳ ಕುರಿತು ದಾಖಲೆ ಸಂಗ್ರಹಿಸುವ ಸಾಧ್ಯತೆಯಿದೆ. ಇದು ಸಿಬಿಐ ನಂತಹ ಕೇಂದ್ರದ ಉನ್ನತ ತನಿಖಾ ಸಂಸ್ಥೆಯಿಂದ ಸಾಧ್ಯವಾಗಬಹುದು. ಹೀಗಾಗಿ ಪ್ರಕರಣ ಕುರಿತ

ಎಸ್​ಐಟಿ ಪೊಲೀಸರು ನಡೆಸಿರುವ ತನಿಖೆಯನ್ನು ಸಿಬಿಐಗೆ ತಕ್ಷಣದಿಂದಲೇ ವರ್ಗಾಯಿಸಲಾಗುತ್ತಿದೆ. ವಿಶೇಷ ತನಿಖಾ ತಂಡದ ಅಧಿಕಾರಿಗಳು ಕೇಸ್ ಡೈರಿ, ವರದಿ ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು. ಸಿಬಿಐ ತನಿಖೆ ಮುಂದುವರಿಸಿ ರ್ತಾಕ ಅಂತ್ಯ ಕಾಣಿಸಬೇಕು ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.

ಪುತ್ರಶೋಕಂ ನಿರಂತರಂ

ಎಸ್​ಐಟಿ ಪೊಲೀಸರ ತನಿಖೆಯಿಂದ ಯಾವುದೇ ಫಲಿತಾಂಶ  ದೊರೆಯುತ್ತಿಲ್ಲ ಎಂಬ ಆತಂಕ ನಾಪತ್ತೆಯಾಗಿರುವ ಅಜಿತಾಬ್ ತಂದೆ ಅಶೋಕ್​ಕುಮಾರ್ ಸಿನ್ಹಾ ಅವರದ್ದಾಗಿದೆ. ‘ಪುತ್ರಶೋಕಂ ನಿರಂತರಂ’ ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ರಾಮ 14 ವರ್ಷ ವನವಾಸಕ್ಕೆ ತೆರಳಿದ್ದಾಗ ಆತನ ತಂದೆ ದಶರಥ ಮಗನಿಗಾಗಿ ವ್ಯಥೆ ಪಡುತ್ತಾನೆ. ಅಜಿತಾಬ್ ನಾಪತ್ತೆಯಾದ ದಿನದಿಂದ ಅವರ ಮನೆಯವರು ಆತಂಕದಿಂದಲೇ ದಿನ ದೂಡುತ್ತಿದ್ದಾರೆ. ರಾಜ್ಯ ಪೊಲೀಸರ ಎಲ್ಲ ರೀತಿಯ ಪ್ರಯತ್ನದ ಹೊರತಾಗಿಯೂ ಅಜಿತಾಬ್ ಪತ್ತೆಯಾಗಿಲ್ಲ. ಹೀಗಾಗಿಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುತ್ತಿದೆ ಎಂದು ಉಚ್ಚ ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಏನಿದು ಪ್ರಕರಣ?

ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಕುಮಾರ್ ಅಜಿತಾಬ್, 2017ರ ಡಿ.18ರಿಂದ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಕುಮಾರ್ ತಂದೆ ವೈಟ್​ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ನಾಪತ್ತೆ ಪ್ರಕರಣದ ಸಂಬಂಧ 2017ರ ಡಿ.20 ಹಾಗೂ 29ರಂದು ಎರಡು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರೂ ರ್ತಾಕ ಅಂತ್ಯ ಕಂಡಿಲ್ಲ.