ಅಘನಾಶಿನಿ ದಡವಾಗಿದೆ ಮೋಜಿನ ತಾಣ

ಶಿರಸಿ: ಪಾಪನಾಶಿನಿ ಎಂದೇ ಹೆಸರಾದ ಅಘನಾಶಿನಿ ನದಿಯ ದಡದಲ್ಲಿ ಪಾಪಿಗಳೇ ತುಂಬಿಕೊಳ್ಳುತ್ತಿ ದ್ದಾರೆ. ಮೋಜು, ಮಸ್ತಿ, ಬಾಟಲ್​ಗಳ ಶಬ್ದ ಇಲ್ಲಿಯ ನಿತ್ಯದ ಸಂಗತಿಯಾಗುತ್ತಿದೆ…!

ಶಿರಸಿ ಸಿದ್ದಾಪುರ ತಾಲೂಕಿನ ಗಡಿ, ಸರಕುಳಿ ಬಳಿಯ ನದಿ ದಂಡೆಯ ಸ್ಥಿತಿ ಇದು. ಅಘನಾಶಿನಿ ಇಲ್ಲಿ ಶಾಂತವಾಗಿ ಹರಿಯುತ್ತಿದ್ದಾಳೆ. ಈ ಶಾಂತತೆಯೇ ಅಘನಾಶಿನಿಯ ಸುಂದರ ಪರಿಸರಕ್ಕೆ ಆತಂಕ ತಂದಿಟ್ಟಿದೆ. ಮಳೆಗಾಲ ಮುಕ್ತಾಯವಾದ ಬಳಿಕ ಇಲ್ಲಿಗೆ ಎಲ್ಲೆಲ್ಲಿಂದಲೋ ಪ್ರವಾಸಿಗರು ಬರಲಾರಂಭಿಸಿದ್ದಾರೆ. ಇಲ್ಲಿ ಸ್ನಾನ ಮಾಡುತ್ತಾರೆ, ಹೊಳೆ ದಡದಲ್ಲಿ ಕುಳಿತು ಊಟ ಮಾಡಿ ಹೋಗುತ್ತಿದ್ದಾರೆ. ಆದರೆ, ಇವಿಷ್ಟೇ ಸಂಗತಿಗಳಾಗಿದ್ದರೆ ಯಾರೂ ತಲೆ ಬಿಸಿ ಮಾಡಿಕೊಳ್ಳುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪುಂಡರ ದಂಡು ಆಗಮಿಸಲಾರಂಭಿಸಿದೆ. ನದಿ ದಡದಲ್ಲಿ ಮಾಂಸದ ಅಡುಗೆ ಸಿದ್ಧಪಡಿಸುತ್ತಿದ್ದಾರೆ. ಮದ್ಯ ಬಾಟಲ್​ಗಳನ್ನು ತಂದು ಇಲ್ಲಿ ಖಾಲಿ ಮಾಡುತ್ತಾರೆ, ನಶೆ ಜಾಸ್ತಿಯಾದ ಬಳಿಕ ಬಾಟೆಲ್​ಗಳನ್ನು ಒಡೆದುಹಾಕುತ್ತಿದ್ದಾರೆ. ಪುರುಷರು ಮಾತ್ರವಲ್ಲದೆ ಮಹಿಳೆಯರೂ ಮೋಜಿಗಾಗಿ ಆಗಮಿಸತೊಡಗಿದ್ದಾರೆ.

ಪರಿಸ್ಥಿತಿ ಕೈಮೀರಿದಾಗ ಅಣಲೇಬೈಲ್ ಗ್ರಾಮ ಪಂಚಾಯಿತಿ ಇಲ್ಲಿಯ ಪರಿಸರ ಕಾಪಾಡಲು ಯತ್ನಿಸಿದೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ನದಿಗೆ ತೆರಳುವ ಮಾರ್ಗದಲ್ಲಿ ಚೆಕ್​ಪೋಸ್ಟ್ ನಿರ್ವಿುಸಿದೆ. ಆದರೆ, ಮೋಜಿಗಾಗಿಯೇ ಬಂದವರು ಚೆಕ್​ಪೋಸ್ಟ್​ನ ಕಾವಲುಗಾರನನ್ನೂ ಬೆದರಿಸಿ ನದಿಯೆಡೆ ತೆರಳುತ್ತಿದ್ದಾರೆ.

ಇದೆಲ್ಲದರ ಪರಿಣಾಮವಾಗಿ ಈಗ ನದಿಯ ಇಕ್ಕೆಲ ದಲ್ಲೂ ಖಾಲಿ ಬಾಟಲ್​ಗಳು, ತ್ಯಾಜ್ಯಗಳ ರಾಶಿ ಬಿದ್ದಿದೆ.

ನೀರೂ ಮಲಿನ: ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದೆ. ಒಂದೆರಡು ದಿನಗಳಲ್ಲಿ ಮಳೆಯಾಗದಿದ್ದರೆ ನೀರು ಹರಿಯುವಿಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಹನಿ ನೀರಿಗೆ ಹಾಹಾಕಾರ ಇರುವ ಈ ಸ್ಥಿತಿಯಲ್ಲಿ ಇರುವ ನೀರು ಮಲಿನಗೊಳ್ಳುತ್ತಿರು ವುದರಿಂದ ಬಳಸಲು ಸಾಧ್ಯವಾಗ ದಂತಾಗಿದೆ.

ಈ ಸ್ಥಳದಲ್ಲಿ ಮಲಿನ ಮಾಡದಂತೆ ಗ್ರಾಮ ಪಂಚಾಯಿತಿಯಿಂದ ಎಚ್ಚರಿಕೆಯ ಫಲಕವನ್ನು ಅಳಡಿಸಿದ್ದೆವು. ಸ್ಥಳೀಯ ಮೂವರಿಗೆ ಜವಾಬ್ದಾರಿ ನೀಡಿ, ಆಗಮಿಸುವವರ ಮೇಲೆ ನಿಗಾ ಇಡುವಂತೆ ಸೂಚಿಸಿದ್ದೆವು. ಆದರೆ, ಮೋಜಿಗಾಗಿ ಬಂದವರು ಸ್ಥಳೀಯರನ್ನೇ ಹೆದರಿಸುತ್ತಿದ್ದಾರೆ. | ಬಾಲಚಂದ್ರ ಹೆಗಡೆ ಹುಡ್ಲಮನೆ ಅಣಲೇಬೈಲ್ ಗ್ರಾ.ಪಂ. ಅಧ್ಯಕ್ಷ

Leave a Reply

Your email address will not be published. Required fields are marked *