ಅಗತ್ಯ ಮೂಲಸೌಕರ್ಯ ಕಲ್ಪಿಸಿ

ಕಲಬುರಗಿ: ಖ್ವಾಜಾ ಬಂದಾ ನವಾಜ್ ದರ್ಗಾ ಸೇರಿ ಕೆಲ ಬಡಾವಣೆಗಳಿಗೆ ಗುರುವಾರ ಭೇಟಿ ನೀಡಿದ ಸಂಸದ ಡಾ.ಉಮೇಶ ಜಾಧವ್ ಅಗತ್ಯವಿರುವ ಮೂಲಸೌಕರ್ಯಗಳ ಕುರಿತು ಮಾಹಿತಿ ಕಲೆ ಹಾಕಿದರು. ಮೊದಲ ಸಲ ನಗರ ಪ್ರದಕ್ಷಿಣೆ ಹಾಕಿದ ಸಂಸದರಿಗೆ ಬಿಜೆಪಿ ಯುವ ನಾಯಕ ಚಂದು ಪಾಟೀಲ್ ಮತ್ತು ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಮ್ ಸಾಥ್ ನೀಡಿದರು.
ಮುಂದಿನ ತಿಂಗಳು ಉರುಸ್ ನಡೆಯಲಿರುವ ಹಿನ್ನೆಲೆಯಲ್ಲಿ ಸವಲತ್ತುಗಳ ಕೊರತೆಯಿದೆ. ರಸ್ತೆ, ಯುಜಿಡಿ, ಬೀದಿ ದೀಪಗಳು ಇತರ ಸೌಕರ್ಯ ಕಲ್ಪಿಸುವುದರ ಜತೆಗೆ ಮೇಲಿಂದ ಮೇಲೆ ಬಂದ್ ಆಗುತ್ತಿರುವ ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಸಂಸದರ ಮುಂದೆ ಬೇಡಿಕೆ ಇಟ್ಟರು.
ಉರುಸ್ ಹಿನ್ನೆಲೆಯಲ್ಲಿ ಅಗತ್ಯ ಸವಲತ್ತು ಕಲ್ಪಿಸಿದರೆ ಭಕ್ತರಿಗೆ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು ಎಂದು ಯುವ ನಾಯಕ ಚಂದು ಪಾಟೀಲ್ ಸಂಸದರು ಹಾಗೂ ಪಾಲಿಕೆ ಆಯುಕ್ತರ ಗಮನಕ್ಕೆ ತಂದರು.
ದಗರ್ಾ ಎದುರಿನ ಒಳಚರಂಡಿ ತುಂಬಿ ಗಲೀಜು ಆಗುತ್ತಿರುವುದನ್ನು ತಾವು ಈ ಹಿಂದೆ ಭೇಟಿ ನೀಡಿದಾಗ ಕಂಡು ಬಂದಿದ್ದರಿಂದ ಇಂದು ಖುದ್ದಾಗಿ ಪಾಲಿಕೆ ಆಯುಕ್ತರು ಹಾಗೂ ಇಂಜಿನಿಯರ್ಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಉರುಸ್ ಆರಂಭವಾಗುವುದರೊಳಗೆ ಒಳಚರಂಡಿ ಕೆಲಸ ಪೂರ್ಣಗೊಳಿಸಿ ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು. ಕಸ ವಿಲೇವಾರಿ ಮಾಡಬೇಕು. ಅಗತ್ಯವಿರುವ ಕಡೆ ರಸ್ತೆ ನಿಮರ್ಿಸಲು ಕ್ರಮ ಕೈಗೊಳ್ಳುವಂತೆ ಜತೆಗಿದ್ದ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ನಂತರ ದಗರ್ಾ ಮುಂಭಾಗದ ಎಲ್ಲ ಪ್ರದೇಶ ಹಾಗೂ ಸುತ್ತಲಿನ ಬಡಾವಣೆಗಳಿಗೆ ತೆರಳಿ ವ್ಯವಸ್ಥೆ, ಮೂಲಸೌಕರ್ಯದ ಸ್ಥಿತಿಗತಿ ಪರಿಶೀಲಿಸಿದರು.
ದರ್ಗಾದ ಸೈಯದ್ ಷಾ ತಖ್ವಿಲಾ ಹುಸೇನಿ, ಪ್ರಮುಖರಾದ ಅಬ್ದುಲ್ ಜಬ್ಬಾರ್ ಸಾಗರ, ಮಹ್ಮದ್ ಜಾಫರ್, ಜಬ್ಬಾರಸಾಬ ಕಾಳಗಿ, ವಾಹಬ್ ಚಿಂಚೋಳಿ ಇತರರಿದ್ದರು.


ಉರುಸ್ ಹಿನ್ನೆಲೆಯಲ್ಲಿ ದಗರ್ಾ ಪ್ರದೇಶದಲ್ಲಿರುವ ಯುಜಿಡಿ ಸಮಸ್ಯೆ ಬಗೆಹರಿಸಲು ಮತ್ತು ಅಗತ್ಯವಿರುವ ರಸ್ತೆ ಇತರ ಸವಲತ್ತುಗಳನ್ನು ಮೂರು ವಾರದಲ್ಲಿ ಕಲ್ಪಿಸಿ ಕೆಲಸ ಆರಂಭಿಸುವಂತೆ ಸೂಚನೆ ನೀಡಲಾಗಿದೆ.
| ಡಾ.ಉಮೇಶ ಜಾಧವ್ ಸಂಸದ

Leave a Reply

Your email address will not be published. Required fields are marked *