ಅಕ್ಷರ ಕಲಿತ ಹೆಣ್ಣು ಕುಟುಂಬದ ಕಣ್ಣು

1 Min Read
ಅಕ್ಷರ ಕಲಿತ ಹೆಣ್ಣು ಕುಟುಂಬದ ಕಣ್ಣು

ಸಾಧನೆಗೆ ಬೇಕು ಸರ್ವರ ಸಹಾರ ಪ್ರಾಚಾರ್ಯೆ ಅನುಸೂಯಮ್ಮ ಅಭಿಮತ ವಿವಿಧೆಡೆ ಮಹಿಳಾ ದಿನಾಚರಣೆ ಸಂಭ್ರಮ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ಅಕ್ಷರ ಕಲಿತ ಹೆಣ್ಣು ಹುಟ್ಟಿದ ಹಾಗೂ ಗಂಡನಮನೆಯ ಕಣ್ಣು ಎಂಬ ಸತ್ಯ ಅರಿತು, ಶಿಕ್ಷಣದ ಕಡೆ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ನಗರದ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಚಾರ‌್ಯೆ ಅನುಸೂಯಮ್ಮ ಹೇಳಿದರು.
ನಗರದ ಐಯುಡಿಪಿ ಬಡಾವಣೆ ಪತಂಜಲಿ ಯೋಗ ಕೇಂದ್ರದಿಂದ ಪ್ರಶಾಂತಿ ವಿದ್ಯಾಲಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ಸಂವಿಧಾನದ ಕೊಟ್ಟಿರುವ ಅವಕಾಶದಿಂದ ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಛಾಪು ಮೂಡಿಸುತ್ತಿದ್ದಾರೆ. ಇನ್ನೂ ಹೆಚ್ಚು ಸಾಧನೆ ಮಾಡಲು ಸರ್ವರ ಸಹಕಾರದ ಜತೆಗೆ ಇಚ್ಛಾಶಕ್ತಿ, ಬದ್ಧತೆ ಅಗತ್ಯ ಎಂದರು.
ಯೋಗಪಟುಗಳಾದ ಹನುಮಕ್ಕ, ಪುಷ್ಪವತಿ,ಗೀತಾ, ಪುಷ್ಪಾ, ಮಂಜುಳಾ, ಶಬರಿ, ಸಂಯುಕ್ತಾ, ಸ್ವರೂಪಾ, ಗೀತಮ್ಮ, ಮಂಜುಳಮ್ಮ ಅವರನ್ನು ಗೌರವಿಸಲಾಯಿತು.
ಹನುಮಂತಪ್ಪ, ರವಿಶಂಕರ್ ಇತರರು ಉಪಸ್ಥಿತರಿದ್ದರು. ಯೋಗ ಕೇಂದ್ರದ ಅಧ್ಯಕ್ಷ ರಾಮಣ್ಣ ಸ್ವಾಗತಿಸಿದರು. ಕಾರ್ಯದರ್ಶಿ ಜಯಣ್ಣ ವಂದಿಸಿದರು. ಶಿಕ್ಷಕ ಮಹಾಲಿಂಗಪ್ಪ ನಿರೂಪಿಸಿದರು.
*ಬ್ಯಾಂಕ್ ಕಾಲನಿ:

ನಗರದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿಂದ ಬ್ಯಾಂಕ್ ಕಾಲನಿ ಯೋಗ ಕೇಂದ್ರದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ರವಿ ಕೆ.ಅಂಬೇಕರ್, ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಾಚಾರ್, ವನಜಾಕ್ಷಮ್ಮ, ಮೋನಿಷಾ, ಅಂಬುಜಾಕ್ಷಿ, ನಾಗಲತಾ, ಶೈಲಾರೆಡ್ಡಿ, ರೂಪಾ, ಚಿತ್ರಾ, ರೇಣುಕಾ, ಭಾಗ್ಯಾ, ಮೀನಾಕ್ಷಿ, ನಾಗರತ್ನಾ, ಸುಧಾ, ಸುಮಾ, ಗೀತಾ, ಶೈಲಜಾ, ಪ್ರೇಮಕುಮಾರಿ, ಕುಮುದಾ ಇತರರಿದ್ದರು.

See also  ದಿನ ಪತ್ರಿಕೆಗಳ ಓದಿನಿಂದ ಸಾಮಾನ್ಯ ಜ್ಞಾನ ವೃದ್ಧಿ
Share This Article