ಅಕ್ರಮ ಸರಾಯಿ ವಶ

ಹೊನ್ನಾವರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಾರ್​ನಲ್ಲಿದ್ದ ಅಂದಾಜು 29 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ಕೆಳಗಿನಪಾಳ್ಯ ಸಮೀಪ ಸೋಮವಾರ ರಾತ್ರಿ ನಡೆದಿದೆ.

ಮಹಾರಾಷ್ಟ್ರ ನೋಂದಣಿಯ ಮಾರುತಿ ಜೆನ್ ಕಾರಿನಲ್ಲಿದ್ದ 120 ಮಿ.ಲೀಟರ್​ನ 190 ಸಾರಾಯಿ ಪ್ಯಾಕೇಟ್​ಗಳನ್ನು ವಶಕ್ಕೆ ಪಡೆಯಲಾಗಿದೆ. ವಾಹನ ಚಾಲಕ ಮತ್ತು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರ್ಯಚರಣೆಯಲ್ಲಿ ಪಿಎಸ್​ಐ ತೇಜಸ್ವಿ, ಎಎಸ್​ಐ ಗಣೇಶ ನಾಯ್ಕ, ಸಿಬ್ಬಂದಿ ಇದ್ದರು.