ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರೇಮಿ ಜತೆ ಸೇರಿ ಪತಿ ಹತ್ಯೆ

ಆನೇಕಲ್: ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆಂದು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಹತ್ಯೆ ಮಾಡಿದ್ದಾಳೆ.

ಬಾಗೇಪಲ್ಲಿಯ ಶ್ರೀನಿವಾಸ್ (32) ಕೊಲೆಯಾದವ. ಪತ್ನಿ ಪ್ರತಿಭಾ (28) ಮತ್ತು ಪ್ರಿಯಕರ ಮುಳಬಾಗಲಿನ ಬಾಲಕೃಷ್ಣ(30)ನನ್ನು ಸೂರ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಂದಾಪುರ ಸಮೀಪದ ಹೀಲಲಗಿ ಗ್ರಾಮದಲ್ಲಿ ಶ್ರೀನಿವಾಸ್ ಹಾಗೂ ಪ್ರತಿಭಾ ಅಪಾರ್ಟ್​ವೆುಂಟ್​ವೊಂದರಲ್ಲಿ ವಾಸವಿದ್ದರು. ಅದೇ ಅಪಾರ್ಟ್​ವೆುಂಟ್​ನ ಮತ್ತೊಂದು ಫ್ಲ್ಯಾಟ್​ನಲ್ಲಿ ಬಾಲಕೃಷ್ಣ ದಂಪತಿ ವಾಸವಿದ್ದರು. ಬಾಲಕೃಷ್ಣ ಹಾಗೂ ಪ್ರತಿಭಾ ನಡುವೆ ಸಲುಗೆ ಬೆಳೆದಿತ್ತು. ಇದು ಅಕ್ರಮ ಸಂಬಂಧಕ್ಕೆ ತಿರುಗಿತ್ತು ಎನ್ನಲಾಗಿದೆ.

ಮೇ 11ರಂದು ಬಾಲಕೃಷ್ಣ ಮತ್ತು ಪ್ರತಿಭಾ ಏಕಾಂತದಲ್ಲಿರುವಾಗ ಶ್ರೀನಿವಾಸ್ ಕೈಗೆ ಸಿಕ್ಕಿಬಿದ್ದಿದ್ದರು. ಈ ವಿಷಯಕ್ಕೆ ಎರಡೂ ಕುಟುಂಬದ ನಡುವೆ ಗಲಾಟೆಯಾಗಿತ್ತು. ಈ ಸಂಬಂಧ ಮಾತುಕತೆಗೆಂದು ಸೂರ್ಯಸಿಟಿ ಬಸ್ ಡಿಪೋ ಬಳಿ ತೆರಳಿದ್ದರು. ಈ ವೇಳೆ ಪೂರ್ವ ನಿಯೋಜನೆಯಂತೆ ಚೂರಿಯಿಂದ ಇರಿದು ಶ್ರೀನಿವಾಸ್​ನನ್ನು ಹತ್ಯೆ ಮಾಡಿ ಬೊಮ್ಮಸಂದ್ರದ ಕೆರೆಗೆ ಶವ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *