ಚಳ್ಳಕೆರೆಯಲ್ಲಿ ವಿವಿಧ ಹಳ್ಳಗಳಿಂದ ಅಕ್ರಮ ಮರಳು ಸಾಗಣೆ: ಪೊಲೀಸರಿಂದ 15 ಎತ್ತಿನಗಾಡಿಗಳು ವಶ

ಚಿತ್ರದುರ್ಗ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 15 ಎತ್ತಿನಗಾಡಿಗಳನ್ನು ಚಳ್ಳಕೆರೆ ಪಟ್ಟಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೊಡ್ಡೇರಿ, ನಗರಂಗೆರೆ ಗ್ರಾಮದ ಹಳ್ಳಗಳಿಂದ ಅಕ್ರಮ ಮರಳು ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಆಧೃಇಸಿ ಗುರುವಾರ ಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎತ್ತಿನಗಾಡಿಗಳನ್ನು ಎತ್ತುಗಳ ಸಮೇತ ಜಪ್ತಿ ಮಾಡಿದರು.