ಚಾಮರಾಜನಗರ ; ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಆಹಾರ ನಿರೀಕ್ಷಕ ಹಾಗೂ ಪೊಲೀಸ್ ಸಿಬ್ಬಂದಿಗಳು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಯಳಂದೂರು ತಾಲೂಕಿನ ಟಿ.ಹೊಸೂರು, ಶಿವಕಹಳ್ಳಿ ಗ್ರಾಮದಿಂದ ಗುರುವಾರ ಸಂಜೆ ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಕೊಂಡು ಅಲ್ಕೆರೆ ಅಗ್ರಹಾರದ ಮೂಲಕ ತೆರಳುತ್ತಿದ್ದ ಕೆಎ.10.ಎಂ. 121ಸಂಖ್ಯೆಯ ಓಮಿನಿ ವ್ಯಾನ್‌ನನ್ನು ಹಾಗೂ 384 ಕೆಜಿ ಅಕ್ಕಿಯನ್ನು ಹಾಗೂ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚೌಡಯ್ಯ (64) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ಸಂದರ್ಭ ತಾಲೂಕು ಆಹಾರ ನಿರೀಕ್ಷಕ ಬಿಸಿಲಯ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ನಾಗೇಂದ್ರ, ಮಹೇಶ್, ಮಹದೇವಪ್ಪ, ಪ್ರಮೋದ್ ಇದ್ದರು.