18 C
Bangalore
Friday, December 6, 2019

ಅಕ್ಕಿಆಲೂರ ಪಪಂ ಆದ್ರೂ ಮಾಡಿ!

Latest News

ನೀರಿದೆ, ಪೂರೈಕೆ ವ್ಯವಸ್ಥೆ ಇಲ್ಲ

ಚಿಕ್ಕಮಗಳೂರು: ಈ ವರ್ಷ ಮಳೆ ಚೆನ್ನಾಗಿಯೇ ಆಗಿದೆ. ಎಲ್ಲ ನೀರಿನ ಮೂಲಗಳೂ ಭರ್ತಿಯಾಗಿವೆ. ನೀರು ಕೊಡಲು ಇನ್ನೇನು ಸಮಸ್ಯೆ? ನಾಗರಿಕರ ಇಂತಹ ಮಾತು,...

ಕುಕ್ಕರಹಳ್ಳಿ ಕೆರೆಯಲ್ಲಿ ಎರಡು ದ್ವೀಪ ನಿರ್ಮಿಸಿ

ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಹೊಸದಾಗಿ ಎರಡು ದ್ವೀಪಗಳನ್ನು ನಿರ್ಮಾಣ ಮಾಡುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ ಮೈಸೂರು...

ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು

ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಹುಣಸೂರು ಅಖಾಡದಲ್ಲಿ ಕುರುಡು ಕಾಂಚಾಣದ ಸದ್ದು ಮಾಡಿರುವುದರ ಜತೆಗೆ ಹೆಂಡದ ಘಾಟು ಹೆಚ್ಚು ವಿಜೃಂಭಿಸಿದೆ! ಮತದಾರರನ್ನು ಸೆಳೆಯಲು ಇಲ್ಲಿ...

ಯುವತಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಸೆರೆ

ಮೈಸೂರು: ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ ನಡೆಸಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಮಂಚೇಗೌಡನಕೊಪ್ಪಲು ನಿವಾಸಿ, ಖಾಸಗಿ ಕಂಪನಿಯ ಉದ್ಯೋಗಿ ಅಮೃತ್...

ಹುಣಸೂರು ಉಪಕದನ ಬಹುತೇಕ ಶಾಂತಿಯುತ

ಮೈಸೂರು: ಜಿದ್ದಾಜಿದ್ದಿನ ಕಣವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಶೇ.76ರಷ್ಟು ಮತದಾನವಾಗಿದೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ.82.54ರಷ್ಟು ಮತ್ತು ಆರು ತಿಂಗಳ...

ಅಕ್ಕಿಆಲೂರ: ಅಕ್ಕಿಆಲೂರ ತಾಲೂಕು ಕೇಂದ್ರವಾಗಬೇಕೆಂಬ 2 ದಶಕಗಳ ಹೋರಾಟಕ್ಕೆ ಹಿಂದಿನ ಸರ್ಕಾರಗಳು ಮನ್ನಣೆ ನೀಡಲಿಲ್ಲ. ಆದರೆ, ಬರುವ ಚುನಾವಣೆ ಪೂರ್ವದಲ್ಲಾದರೂ ಅಕ್ಕಿಆಲೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿಯಾದರೂ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

152 ಗ್ರಾಮಗಳನ್ನು ಒಳಗೊಂಡು ದೊಡ್ಡ ತಾಲೂಕುಗಳಲ್ಲಿ ಒಂದಾಗಿರುವ ಹಾನಗಲ್ಲ ತಾಲೂಕನ್ನು ಉತ್ತಮ ಮತ್ತು ಸುಲಭ ಆಡಳಿತ ದೃಷ್ಟಿಯಿಂದ ವಿಭಜಿಸಿ, ಹಾವೇರಿ ಜಿಲ್ಲೆಯ ದೊಡ್ಡ ಗ್ರಾ.ಪಂ. ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಅಕ್ಕಿಆಲೂರನ್ನು ತಾಲೂಕು ಕೇಂದ್ರವಾಗಿ ಘೊಷಿಸಬೇಕು ಎಂಬ ಹೋರಾಟ ಗ್ರಾ.ಪಂ.ನಿಂದ ವಿಧಾನ ಸೌಧದವರೆಗೂ ಪಕ್ಷಾತೀತವಾಗಿ ನಡೆದವು. ಆದರೆ, ಫಲಿತಾಂಶ ಮಾತ್ರ ಶೂನ್ಯ. ಅಕ್ಕಿಆಲೂರು ತಾಲೂಕು ರಚನೆಗೆ ಬೇಕಾದ ಎಲ್ಲ ಅರ್ಹತೆಗಳನ್ನು ಹೊಂದಿತ್ತಾದರೂ, ಹಾನಗಲ್ಲ ತಾಲೂಕು ಕೇಂದ್ರ ಸ್ಥಾನದಿಂದ ಕೇವಲ 7 ಕಿ.ಮೀ. ಅಂತರದಲ್ಲಿರುವುದು ತೊಡಕಾಗಿ ಪರಿಣಮಿಸಿದೆ.

ಇದನ್ನೇ ಮುಂದಿಟ್ಟುಕೊಂಡು ಅಕ್ಕಿಆಲೂರ ತಾಲೂಕು ರಚನೆ ಕಷ್ಟ ಎಂದು 2017ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ, ತಾಲೂಕು ಹೋರಾಟ ಸಮಿತಿ ನಿಯೋಗಕ್ಕೆ ತಿಳಿಸಿದ್ದರು. ಇದರಿಂದ ಉತ್ಸಾಹದಲ್ಲಿದ್ದ ಹೋರಾಟಗಾರರು ತಾಲೂಕು ರಚನೆ ಹೋರಾಟ ಕೈಬಿಡುವ ಹಂತಕ್ಕೆ ಬಂದಿದ್ದರು. ಇದಾದ ನಂತರ ಗ್ರಾ.ಪಂ.ನಿಂದ ಪಟ್ಟಣ ಪಂಚಾಯಿತಿಗಾದರೂ ಮೇಲ್ದರ್ಜೆಗೇರಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ.

9 ವಾರ್ಡ್​ಗಳು, 31 ಸದಸ್ಯರ ಸಂಖ್ಯಾ ಬಲ ಹಾಗೂ 20 ಸಾವಿರ ಜನಸಂಖ್ಯೆ ಹೊಂದಿರುವ ಅಕ್ಕಿಆಲೂರ ಸದ್ಯ ಹಾವೇರಿ ಜಿಲ್ಲೆಯ ದೊಡ್ಡ ಗ್ರಾ.ಪಂ. ಆಗಿದೆ. ಅಕ್ಕಿಆಲೂರ ಹೋಬಳಿ 16 ಗ್ರಾ.ಪಂ.ಗಳ 52 ಗ್ರಾಮಗಳನ್ನು ಹೊಂದಿದೆ. ಶಿರಸಿ ಮೊಳಕಾಲ್ಮೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮ, ಹಾನಗಲ್ಲ ತಾಲೂಕಿನ ಕಂದಾಯ ಪಟ್ಟಣವಾಗಿದೆ. ಎಲ್ಲದಕ್ಕೂ ಹೆಚ್ಚಾಗಿ ಹಾನಗಲ್ಲ ತಾಲೂಕಿನ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ.

ಅನುದಾನ ಸಮಸ್ಯೆಯಲ್ಲಿ ಗ್ರಾ.ಪಂ.: ಅಕ್ಕಿಆಲೂರಿಗೆ ಸಾಮಾನ್ಯ ಗ್ರಾ.ಪಂ.ಗೆ ಬರುವಷ್ಟೇ ಅನುದಾನ ಬರುತ್ತಿದೆ. ಸರ್ಕಾರದಿಂದ ಪ್ರತಿ ವರ್ಷ ಹಂತ ಹಂತವಾಗಿ 14ನೇ ಹಣಕಾಸಿನಿಂದ 40 ಲಕ್ಷ ರೂ. ಮತ್ತು ಶಾಸನ ಬದ್ಧ ಅನುದಾನದಿಂದ 10 ಲಕ್ಷ ರೂ. ಬರುತ್ತಿದೆ. ಇದರಲ್ಲಿ ಸಿಬ್ಬಂದಿ ವೇತನ, ಪಟ್ಟಣದ ಅಭಿವೃದ್ಧಿ, ವಿದ್ಯುತ್ ಬಿಲ್ ಸೇರಿ ಇತರ ಖರ್ಚು- ವೆಚ್ಚಗಳನ್ನು ಸೇರಿಸಿದರೆ ಅನುದಾನ ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ ಗ್ರಾ.ಪಂ.ಗೆ ಅನುದಾನ ಸಮಸ್ಯೆ ದೊಡ್ಡ ತೆಲೆನೋವಾಗಿದೆ. ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದರೆ ಕೋಟ್ಯಂತರ ರೂ. ಅನುದಾನ ಬರಲಿದೆ. ಇದರಿಂದ ಒಟ್ಟಾರೆ ಅಭಿವೃದ್ಧಿ ಸಾಧ್ಯವಾಗಲಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಮಾತು ಮರೆತ ಜನಪ್ರತಿನಿಧಿಗಳು: ಪ.ಪಂ. ರಚನೆಗೆ ನಂಜುಂಡಯ್ಯಮಠ ವರದಿ ಪ್ರಕಾರ 16 ಸಾವಿರ ಜನಸಂಖ್ಯೆ ಅಗತ್ಯ. ಅಕ್ಕಿಆಲೂರ ಎಲ್ಲ ನಿಯಾಮವಳಿ ಮತ್ತು ಅರ್ಹತೆ ಹೊಂದಿದೆ, ಶೀಘ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದ್ದ ಹಿಂದಿನ ಶಾಸಕ ಮನೋಹರ ತಹಸೀಲ್ದಾರ್ ಮಾತು ಮರೆತರು. ‘ಅಕ್ಕಿಆಲೂರ ಪ.ಪಂ. ಆದರೆ 50ಕ್ಕೂ ಹೆಚ್ಚು ಗ್ರಾ.ಪಂ.ಗಳಿಗೆ ಅನುಕೂಲವಾಗಲಿದೆ’ ಎಂದು ಹೇಳಿದ್ದ ಸಿ.ಎಂ. ಉದಾಸಿಯವರೂ ಸುಮ್ಮನಾಗಿದ್ದರು. ಇದರಿಂದ ಜನರ ಕನಸು ನನಸಾಗಲೇ ಇಲ್ಲ.

ಕಾಲ ಕೂಡಿ ಬಂದಿದೆ!: ಸದ್ಯ ಕಾಲ ಕೂಡಿಬಂದಿದೆ, ಸಿ.ಎಂ. ಉದಾಸಿ ಅವರು ಪ್ರಸಕ್ತ ಶಾಸಕರಾಗಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಜತೆಗೆ ಅವರ ಆಪ್ತರಾದ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದಾರೆ. ಈಗಲಾದರೂ ಅವರು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದು ಬರುವ ಗ್ರಾ.ಪಂ. ಚುನಾವಣೆಯೊಳಗೆ ಅಕ್ಕಿಆಲೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಘೊಷಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಈ ಭಾಗದ ಜನರ ಆಶಯ.

ವ್ಯಾಪಾರ, ಸಾಂಸ್ಕೃತಿಕ ಕೇಂದ್ರ ಮತ್ತು ಭೂ ವಿಸ್ತೀರ್ಣದಲ್ಲಿ ಅಕ್ಕಿಆಲೂರ ದೊಡ್ಡ ಊರು. ಪಟ್ಟಣದ ಸಮಗ್ರ ಅಭಿವೃದ್ಧಿ ಮತ್ತು ಸಾರ್ವಜನಿಕರ ಸ್ಥಿತಿಗತಿಗಳ ಉನ್ನತಿಗೆ ಅಕ್ಕಿಆಲೂರ ಪಟ್ಟಣ ಪಂಚಾಯಿತಿ ರಚನೆ ಅಗತ್ಯವಾಗಿದೆ. ಶಿವಬಸವ ಸ್ವಾಮೀಜಿ ಮತ್ತು ಪಟ್ಟಣದ ಎಲ್ಲ ಪ್ರಮುಖರು ಸರ್ಕಾರದ ಗಮನ ಸೆಳೆಯುತ್ತೇವೆ. ಶೀಘ್ರ ಅಕ್ಕಿಆಲೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕು.
| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುತ್ತಿನಕಂತಿಮಠ, ಅಕ್ಕಿಆಲೂರ

ಒಂದು ವೇಳೆ ಅಕ್ಕಿಆಲೂರ ಪಟ್ಟಣ ಪಂಚಾಯಿತಿ ಆದರೆ ಅಭಿವೃದ್ಧಿ ದಿಸೆ ಬದಲಾಗಲಿದೆ. ಈ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡುತ್ತೇನೆ. ಒಂದು ವೇಳೆ ಅಗತ್ಯ ಜನಸಂಖ್ಯೆ ಇಲ್ಲದಿದ್ದರೆ ಬಾಳೂರ ಗ್ರಾಮವನ್ನು ಅಕ್ಕಿಆಲೂರಿಗೆ ಸೇರಿಸಿ ಪಟ್ಟಣ ಪಂಚಾಯಿತಿ ಮಾಡುವ ಕುರಿತು, ಸಿಎಂ ಯಡಿಯೂರಪ್ಪನವರ ಗಮನಕ್ಕೆ ತರುತ್ತೇನೆ.
| ಸಿ.ಎಂ. ಉದಾಸಿ, ಶಾಸಕ

Stay connected

278,730FansLike
580FollowersFollow
619,000SubscribersSubscribe

ವಿಡಿಯೋ ನ್ಯೂಸ್

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...

VIDEO| 3ನೇ ಮಹಡಿಯಿಂದ ಬಿದ್ದರೂ ಗಾಯವಾಗದೇ ಬದುಕುಳಿದ 2 ವರ್ಷದ...

ಪಂಜಿಮ್​: ದಮನ್ ಮತ್ತು ದಿಯುನಲ್ಲಿರುವ ಹೌಸಿಂಗ್​ ಕಾಂಪ್ಲೆಕ್ಸ್​ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಎರಡು ವರ್ಷದ ಮಗುವೊಂದು ಪವಾಡ ರೀತಿಯಲ್ಲಿ ಬದುಕುಳಿದಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ...

‘ಅಬುಧಾಬಿ ಯುವರಾಜ ಮತ್ತು ಪುಟ್ಟ ಬಾಲಕಿ’ಯ ಭಾವನಾತ್ಮಕ ಕತೆಯಿದು…; ನಿರಾಸೆಗೊಂಡ...

ಈ ಸುದ್ದಿ ಓದಿ, ವಿಡಿಯೋ ನೋಡಿದರೆ ಒಂದು ಕ್ಷಣ ಹೃದಯಕ್ಕೆ ತಟ್ಟುತ್ತದೆ. ಪುಟ್ಟ ಹುಡುಗಿಯ ನಿರಾಸೆ ಮತ್ತು ಅಬುಧಾಬಿಯ ಯುವರಾಜ ಶೇಖ್​ ಮೊಹಮ್ಮದ್​ ಬಿನ್​​ ಜಾಯೇದ್​ ಅವರ ಮೃದು ಮನಸು ಇಲ್ಲಿ ಅನಾವರಣಗೊಂಡಿದೆ. ಸೌದಿ...

VIDEO| ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿಚಾರವಾಗಿ ಪ್ರಧಾನಿ...

ಮುಂಬೈ: ತೆಲಂಗಾಣದಲ್ಲಿ ನಡೆದ ಮಹಿಳಾ ಪಶುವೈದ್ಯಾಧಿಕಾರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದ್ದು, ಆರೋಪಿಗಳಿಗೆ ಘೋರ ಶಿಕ್ಷೆಯಾಗಬೇಕೆಂಬ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಭಾರತೀಯ ಸಿನಿಮಾ ರಂಗದ ತಾರೆಯರು ಕೂಡ...

VIDEO| ಸಫಾರಿ ವಾಹನವನ್ನು ಹಿಮ್ಮೆಟ್ಟಿ ಬಂದ ಹುಲಿ ವಿಡಿಯೋ ವೈರಲ್​:...

ಸವಾಯಿ ಮಧೊಪುರ್​: ರಾಜಸ್ಥಾನದ ರಣಥಂಬೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಹುಲಿಯೊಂದು ಪ್ರವಾಸಿಗರಿದ್ದ ಸಫಾರಿ ಜೀಪ್​ ಅನ್ನು ಹಿಮ್ಮೆಟ್ಟಿಸಿಕೊಂಡು ಬಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿರುವ ಹುಲಿಯನ್ನು ಕೋಡ್​...