ಅಕ್ಕಮಹಾದೇವಿ ಸ್ತ್ರೀ ಸಂಕುಲಕ್ಕೆ ಮಾದರಿ

ಬೀದರ್ : ಜಗತ್ತಿನ ಪ್ರಥಮ ಕವಯತ್ರಿ ಅಕ್ಕ ಮಹಾದೇವಿ ಸ್ತ್ರೀ ಸಂಕುಲಕ್ಕೆ ಮಾದರಿಯಾಗಿದ್ದಾರೆ. ಅಕ್ಕನವರ ಆದರ್ಶ ನಾವು ಅಳವಡಿಸಿಕೊಂಡು ಆಚರಿಸಬೇಕು ಎಂದು ಸಾಹಿತಿ ಮೇನಕಾ ಪಾಟೀಲ್ ಹೇಳಿದರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜ ಹಾಗೂ ಅಕ್ಕ ನಾಗಲಾಂಬಿಕಾ ಮಹಿಳಾ ಗಣದಿಂದ ನಗರದ ಬಸವ ಮಂಟಪದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಉತ್ಸವದಲ್ಲಿ ಮಾತನಾಡಿ, ಅಕ್ಕ ಮಹಿಳಾ ಸಮುದಾಯದ ಕಣ್ಮಣಿ. ಸಹನೆ ಸಾಕಾರಮೂತರ್ಿ. ಜಗತ್ತು ಕಂಡ ಅಪ್ರತಿಮ ಮಹಿಳೆ. ಅಧ್ಯಾತ್ಮ ನೆಲೆಗಟ್ಟಿನ ಮೇಲೆ ಅನೇಕ ವಚನ ರಚಿಸಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮಾತೆ ಸತ್ಯಾದೇವಿ ಮಾತನಾಡಿದರು. ಮಹಿಳಾ ಗಣವು ಅಕ್ಕಮಹಾದೇವಿ ತೊಟ್ಟಿಲು ನಡೆಸಿತು. ಅನಿತಾ ಚಾಂಬೋಳ, ಲಕ್ಷ್ಮೀಬಾಯಿ ಪಾಟೀಲ್, ಶರಣಮ್ಮ ಚಿಲ್ಲಗರ್ೆ, ಸರಸ್ವತಿ ಶೆಟಕಾರ, ಶೋಭಾ ನಿಂಬೂರ ಅವರನ್ನು ಸನ್ಮಾನಿಸಲಾಯಿತು. ಅರುಣಾದೇವಿ ಪಾಟೀಲ್ ಧ್ವಜಾರೋಹಣ ಮಾಡಿದರು. ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಅಧ್ಯಕ್ಷೆ ಸುಷ್ಮಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಲಲಿತಾ ಸಂಗಮದ್, ವಿದ್ಯಾವತಿ ಪಾಟೀಲ್, ನಿರ್ಮಲಾ ನೀಲಂಗೆ, ಮಲ್ಲಿಕಾರ್ಜುನ ಜೈಲರ್, ಶಾಂತಾಬಾಯಿ ಬಿರಾದಾರ, ಸುಮಾ ಕಮಠಾಣೆ, ವಿದ್ಯಾವತಿ ನಿಡಗುಂದೆ, ಇಂದುಮತಿ ತಗಾರೆ, ಮಂಜುಳಾ ಸ್ವಾಮಿ, ಸರೋಜಿನಿ ಪಾಟೀಲ್, ಸಂಗೀತಾ ಗೂಳೆ, ಜ್ಯೋತಿ ಪಾಟೀಲ್, ಕಲಾವತಿ ಗಂದಿಗುಡೆ, ಗೋದಾವರಿ ಪಾಟೀಲ್ ಇದ್ದರು. ಕಲ್ಪನಾ ಸಾವಲೆ ಸ್ವಾಗತಿಸಿದರು. ಸುಲೋಚನಾ ಪಟ್ನೆ ನಿರೂಪಣೆ ಮಾಡಿದರು. ಗೌರಿ ಶೆಟಕಾರ ವಂದಿಸಿದರು.