More

    ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯವು ಚಾಂಪಿಯನ್

    ಬಾಗಲಕೋಟೆ: ನಗರದಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಬಿ.ವಿ.ವಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ ಚಾಂಪಿಯನ್ ಶಿಪ್ ಪಡೆದರೆ, ಶ್ರೀಮತಿ ಬಂಗಾರಮ್ಮ ಸಜ್ಜನ್ ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿಜಯಪುರ ರನ್ನರ-ಅಪ್ ಪಡೆದುಕೊಂಡಿತು.

    ಬಿ.ವ್ಹಿ.ವ್ಹಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟ, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ,ವಿಜಯಪುರ ಇವರ ಸಹಯೋಗದಲ್ಲಿ ಅಂತರ-ಮಹಾವಿದ್ಯಾಲಯಗಳ ಖೋ-ಖೋ ಹಾಗೂ ಹಾಕಿ ಪಂದ್ಯಾಟಗಳು ಮತ್ತು ೨೦೨೩-೨೪ರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ತಂಡದ ಆಯ್ಕೆ ಪಕ್ರಿಯೆ ಸೋಮವಾರ ಜರುಗಿತು, ಈ ಕ್ರೀಡಾಕೂಟದಲ್ಲಿ ನಡೆÀದ ಹಾಕಿ ಪಂದ್ಯಾವಳಿಯಲ್ಲಿ ಬಿ.ವಿ.ವಿ.ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ ಚಾಂಪಿಯನ್ ಶಿಪ್ ಪಡೆದರೆ, ಶ್ರೀಮತಿ ಬಂಗಾರಮ್ಮ ಸಜ್ಜನ್ ಮಹಿಳಾ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ವಿಜಯಪುರ ರನ್ನರ-ಅಪ್ ಪಡೆದುಕೊಂಡಿತು ಹಾಗೂ ಖೋ-ಖೋ ಪಂದ್ಯಾಟದಲ್ಲಿ ಕೆ.ಎಲ್.ಇ ಯ ರಾಜರಾಜೇಶ್ವರಿ ಮಹಿಳಾ ಕಲಾ, ವಾಣಿಜ್ಯ ಮಹಾವಿದ್ಯಾಲಯ, ರಾಣೇಬೆನ್ನೂರು ಚಾಂಪಿಯನ್ ಶಿಪ್ ಆದರೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ರನ್ನರ-ಅಪ್ ಪಡೆದುಕೊಂಡಿತು.
    ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಮಹಿಳಾ ಮಹಾವಿದ್ಯಾಲಯಗಳು ಪಾಲ್ಘೋಂಡಿದ್ದವು.

    ನAತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಿ ವಿ.ವಿ. ಸಂಘದ ಕಾಲೇಜು ಆಡಳಿತ ಮಂಡಳಿ ಸದಸ್ಯ ಶರಣ್ ಎ ನಾವಲಗಿ ಆಗಮಿಸಿ ವಿಜೇತರಿಗೆ ಪಾರತೋಷಕಗಳನ್ನು ವಿತರಿಸಿ,ಕ್ರೀಡೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿನಿಯು ಮೈಗೂಡಿಸಿಕೊಳ್ಳಬೇಕು, ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಸುವುದಲ್ಲದೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ ಎಂದರು.

    ಇದೇ ಸಂದರ್ಭದಲ್ಲಿ ವಿದ್ಯಾಗಿರಿಯ ಬಸವೇಶ್ವರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಟಿ ಬಿ ಕೋರಿ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಅಕ್ಕಮಹಾದೇವಿ ಮಹಿಳಾ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಪ್ರಾಚಾರ್ಯ ಶ್ರೀಮತಿ ಎಸ್.ಜೆ ಒಡೆಯರ ವಹಿಸಿದ್ದರು, ಐಕ್ಯೂಎಸಿ ಸಂಯೋಜಕಿ ಪಿ.ಕೆ. ಚೌಗಲಾ ಸ್ವಾಗತಿಸಿದರು, ದೈಹಿಕ ನಿರ್ದೇಶಕ ಡಾ. ಎಮ್.ವಿ. ಬಾಜಪ್ಪನವರ್ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts