More

  ಅಕ್ರಮವಾಗಿ ಸಾಗಿಸುತ್ತಿದ್ದ 8 ಜಾನುವಾರು ರಕ್ಷಣೆ; ಆರೋಪಿಗಳ ಬಂಧನ

  ಹಾವೇರಿ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 8 ಜಾನುವಾರುಗಳನ್ನು ತಾಲೂಕಿನ ಗುತ್ತಲ ಠಾಣೆ ಪೊಲೀಸರು ಬೆಳವಿಗಿ ಕ್ರಾಸ್ ಬಳಿ ಭಾನುವಾರ ರಾತ್ರಿ ರಕ್ಷಣೆ ಮಾಡಿದ್ದಾರೆ.
  ಬ್ಯಾಡಗಿ ತಾಲೂಕಿನ ಕಾಗಿನೆಲೆ ಮೆಹಬೂಬ್ ನಗರದ ತೌಫಿಕ್ ಅಬ್ದುಲ್ ಬಶೀರ ಕುರೇಶಿ (20), ರಶೀದ ಅಬ್ದುಲ್ ಬಶೀರ ಕುರೇಶ (26) ಹಾಗೂ ಆಶೀಪ್ ಅಬ್ದುಲ್ ಬಸೀರ ಕುರೇಶಿ ಎಂಬುವರು ಬುಲೆರೋ ವಾಹನದಲ್ಲಿ ಅಕ್ರಮವಾಗಿ 2 ಎಮ್ಮೆ, 6 ಆಕಳು ಸಾಗಾಟ ಮಾಡುತ್ತಿದ್ದರು.
  ಇವರು ಬೆಳವಿಗಿ ಕ್ರಾಸ್ ಬಳಿ ಬಂದಾಗ ಪೊಲೀಸರು ವಾಹನ ತಡೆದು ಪರಿಶೀಲಿಸಿದಾಗ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರು ಆರೋಪಿಗಳನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಸಮೀಪದ ಗೋಶಾಲೆಗೆ ಕಳುಹಿಸಿದ್ದಾರೆ. ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  See also  ಮಾಯಾ-ಕಾರ್ಖಾನಾ ಗ್ಯಾಂಗ್ ಜಂಟಿ ಕೃತ್ಯ ಹೆಡ್‌ಕಾನ್‌ಸ್ಟೇಬಲ್ ಕೊಲೆ ಯತ್ನ ಪ್ರಕರಣ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts