ಬೆಂಗಳೂರು: ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದವರು ಪಂಜಾಬ್ ಮೂಲದ ಗಾಯಕ ಜಸ್‌ಕರಣ್ ಸಿಂಗ್. ತಮ್ಮ ಮಧುರ ಧ್ವನಿಯಿಂದ ಸಮ್ಮೋಹಗೊಳಿಸುವ ಇವರಿಗೆ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ‘ದ್ವಾಪರ ದಾಟುತ’ ಗೀತೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಈ ಹಾಡು ಹೆಚ್ಚುವೈರಲ್ ಆಗುವುದರ ಜತೆಗೆ ಜಾಲತಾಣದಲ್ಲಿ ರೀಲ್ಸ್ ಕಂಡಿತ್ತು. ಇದೀಗ ಕನ್ನಡದಲ್ಲೇ ಬ್ಯಾಕ್ ಟು ಬ್ಯಾಕ್ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಲು ಅವಕಾಶ ದೊರೆತಿದೆ. ಅದರಲ್ಲಿ ಇತ್ತೀಚೆಗಷ್ಟೆ ‘ಅಂಶು’ ಚಿತ್ರದ ‘ನೀನು ನಂಬೋ ನಾಳೆ’ ಎಂಬ ಶೀರ್ಷಿಕೆ ಹಾಡು ಬಿಡುಗಡೆಯಾಗಿದೆ. ಸಾಂಗ್‌ಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ‘ನೀನು ನಂಬೋ ನಾಳೆ, ನೀರಾ ಮೇಲೆ ಗುಳ್ಳೆ, ಬಿಂಬ ಕಾಣೋ ವೇಳೆ ನಿಜವೂ ಒಂದು ಸುಳ್ಳೆ’ ಎಂದು ಸಾಗುವ ಈ ಹಾಡನ್ನು ಮಹೇಂದ್ರ ಗೌಡ ರಚಿಸಿದ್ದು, ಕೆ.ಸಿ ಬಾಲಸಾರಂಗನ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಸಿ.ಚನ್ನಕೇಶವ ನಿರ್ದೇಶಿಸುತ್ತಿರುವ ಮೊದಲ ಚಿತ್ರ ‘ಅಂಶು’. ಸೈಕಡೆಲಿಕ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾದಲ್ಲಿ ‘ಗಟ್ಟಿಮೇಳ’ ಖ್ಯಾತಿಯ ನಿಶಾ ರವಿಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ದೊರೆತಿದ್ದು, ಇದೇ 21ರಂದು ಬಿಡುಗಡೆಗೆ ಸಿದ್ಧವಾಗಿದೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣ, ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.
‘ಅಂಶು’ಗೆ ಧ್ವನಿಯಾದ ಜಸ್‌ಕರಣ್: ಪಂಜಾಬಿ ಮೂಲದ ಗಾಯಕನ ಕನ್ನಡ ಮೋಡಿ
You Might Also Like
Monday Puja Tips: ಸೋಮವಾರದಂದು ಈ ಕಾರ್ಯಗಳನ್ನು ಮಾಡಿ ನೋಡಿ.. ಶಿವನ ಕೃಪೆಗೆ ಪಾತ್ರರಾಗುತ್ತೀರ…
Monday Puja Tips: ಸೋಮವಾರ ಹಿಂದೂ ಧರ್ಮದಲ್ಲಿ ಶಿವನಿಗೆ ಮೀಸಲಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು…
ನೀವು ಅಡುಗೆಗೆ ಪಾಮ್ ಆಯಿಲ್ ಬಳಸುತ್ತಿದ್ದೀರಾ? ಹಾಗಾದರೆ ಈ ವಿಚಾರ ನಿಮಗೆ ತಿಳಿದಿರಲೇಬೇಕು! Palm Oil
Palm Oil : ಭಾರತದಲ್ಲಿ ಅಡುಗೆಗೆ ಹಲವು ಬಗೆಯ ಎಣ್ಣೆಗಳನ್ನು ಬಳಸಲಾಗುತ್ತದೆ. ಕಡಲೆ ಎಣ್ಣೆ, ಸೂರ್ಯಕಾಂತಿ…
Relationship Tips : ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡುತ್ತಿದ್ದೀರಾ? ಈ ರೀತಿಯಲ್ಲಿ ನಿಮ್ಮ ಸಂಬಂಧ ಗಟ್ಟಿ ಮಾಡಿಕೊಳ್ಳಿ…
Relationship Tips : ಪತಿ-ಪತ್ನಿಯರ ನಡುವಿನ ಸಣ್ಣ ಜಗಳಗಳು ಸಮಯದೊಂದಿಗೆ ಪರಿಹರಿಸಲ್ಪಡುತ್ತವೆ, ಇಲ್ಲದಿದ್ದರೆ ಕೆಲವೊಮ್ಮೆ ಉದ್ವಿಗ್ನತೆ…