More

    ಅಂಬೇಡ್ಕರ್ ಭವನದಲ್ಲಿ ಅನೈರ್ಮಲ್ಯ

    ಶ್ರೀರಂಗಪಟ್ಟಣ: ಪಟ್ಟಣದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದ ಒಳಭಾಗದಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಶುಚಿಗೊಳಿಸದ ಪುರಸಭೆ ವಿರುದ್ಧ್ದ ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

    ಪಟ್ಟಣದ ವೆಲ್ಲೆಸ್ಲಿ ಹಳೆಯ ಸೇತುವೆ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಅಂಬೇಡ್ಕರ್ ಒಕ್ಕೂಟ, ದಸಂಸ ಸಂಘಟನೆಗಳು ಸಭೆ ಕರೆದಿದ್ದು, ಚರ್ಚೆ ನಡೆಸಲು ಕಟ್ಟಡ ಒಳಭಾಗ ಪ್ರವೇಶಿಸಿದ ವೇಳೆ ಆವರಣದಲ್ಲಿ ಸಾಕಷ್ಟು ಬೀದಿ ನಾಯಿಗಳು ಆಶ್ರಯ ಪಡೆದಿದ್ದು, ನಾಯಿಗಳ ಮಲಮೂತ್ರ, ಪ್ಲಾಸ್ಟಿಕ್ ತ್ಯಾಜ್ಯಗಳು, ಮೂಳೆ ಚೂರುಗಳು, ಹಳೆಯ ಬಟ್ಟೆಗಳಿಂದ ತುಂಬಿತ್ತು. ಆದರೂ ಇದನ್ನು ಸ್ವಚ್ಛಗೊಳಿಸಲು ಪುರಸಭೆ ಅಧಿಕಾರಿಗಳು ನಿರ್ಲಕ್ಷೃ ತೋರಿದ್ದಾರೆ ಎಂದು ದಸಂಸ ಮುಖಂಡರು ಅಸಮಾಧಾನ ವ್ಯಕ್ತಪಡಿದರು.

    ಈ ಹಿಂದೆ ಸಮಾಜ ಕಲ್ಯಾಣ ಇಲಾಖೆ ಸುಪರ್ದಿನಲ್ಲಿದ್ದ ಅಂಬೇಡ್ಕರ್ ಭವನವನ್ನು ಅಭಿವೃದ್ಧಿಪಡಿಸುವ ಹಾಗೂ ಸಾರ್ವಜನಿಕರ ಬಳಕೆಗೆ ಉಪಯೋಗಿಸುವ ಉದ್ದೇಶದಿಂದ ಹಸ್ತಾಂತರ ಮಾಡಲಾಗಿತ್ತು. ಆದರೆ ಅಂಬೇಡ್ಕರ್ ಭವನದ ನಿರ್ವಹಣೆಯಲ್ಲೂ ತಾರತಮ್ಯ ತೋರಿ ಅವಾಂತರ ಮಾಡುವುದಾದರೆ, ದಸಂಸ ಸಂಘಟನೆಗಳು ಅಥವಾ ಸಮಾಜ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಲಿ ಎಂದು ಒತ್ತಾಯಿಸಿದರು.

    ಮುಖಂಡರಾದ ಗಂಜಾಂ ರವಿಚಂದ್ರು, ಹುರುಳಿ ಕ್ಯಾತನಹಳ್ಳಿ ಶಿವಕುಮಾರ್, ಹೊನ್ನರಾಜು, ಅಲ್ಲಾಪಟ್ಟಣ ಜಯಂತಿ, ಪಾಂಡು, ಮುಂಡಗದೊರೆ ಮೋಹನ್, ಚಂದ್ರಶೇಖರ್, ಗಣಂಗೂರು ನಾಗರಾಜು, ಕುಮಾರ್, ಬೆಳಗೊಳ ಬಸವಣ್ಣ, ಶ್ವೇತಾ ಇತರರು ಇದ್ದರು.

    See also  ಬರ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts