ಅಂಬೇಡ್ಕರ್ ಆದರ್ಶ ಅನುಸರಿಸಿ

ಮುಳಬಾಗಿಲು: ಭಗವಾನ್ ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕ ದಾರ್ಶನಿಕರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬಂದಾಗ ಸಮಾಜದಲ್ಲಿ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳಾಗಿ ನಿರ್ವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

ನಗರದ ಡಿವಿಜಿ ಗಡಿ ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಳಬಾಗಿಲು ಶಾಖೆ ಸಹಯೋಗದಲ್ಲಿ 2533ನೇ ಬುದ್ಧ ಪೌರ್ಣಿಮೆ ಹಾಗೂ ಡಿ.ಬಿ.ಆರ್.ಅಂಬೇಢ್ಕರ್ 128ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

ಕ್ರಿಪೂ 6ನೇ ಶತಮಾನದಲ್ಲೇ ಭಾರತದಲ್ಲಿ ಸುವರ್ಣಯುಗ ಉದಯವಾಗಿತ್ತು, ರಾಜ ಮನೆತನದ ಯುವರಾಜನಾಗಿದ್ದ ಗೌತಮ ತನ್ನ ರಾಜ್ಯಭಾರ ತೊರೆದು ಮಾನವನ ದುಃಖ ನಿವಾರಿಸಲು ಸತ್ಯ ಕಂಡುಹಿಡಿಯಲು ಸತತ 6 ವರ್ಷಗಳ ಕಾಲ ಗಯಾಕ್ಷೇತ್ರದ ಅಶ್ವತ್ಥವೃಕ್ಷದ ಕೆಳಗೆ ತಪಸ್ಸಿನ ಮೂಲಕ ಪರಿಪೂರ್ಣ ಜ್ಞಾನವಂತನಾಗಿ ಬುದ್ಧ ಎಂದೆಂದಿಗೂ ಅಮರನಾಗಿಯೇ ಉಳಿದಿದ್ದಾರೆ, ಅಸಮಾನತೆ ಹೋಗಲಾಡಿಸಲು ಪ್ರಯತ್ನ ನಡೆಸಿದ ಮಹಾನ್ ಮೇರು ವ್ಯಕ್ತಿಯೆಂದು ಬಣ್ಣಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್, ಹಂಪಿ ವಿಶ್ವವಿದ್ಯಾಲಯ ಸಂಶೋಧಕ ರೋಜಾರಪಲ್ಲಿ ವೆಂಕಟರವಣಪ್ಪ ಅವರು ಬುದ್ಧ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾತನಾಡಿದರು.

ಜಿಲ್ಲಾ ಸಮಿತಿ ಮುಖಂಡರಾದ ಎಚ್.ಮುನಿಚೌಡಪ್ಪ, ಸಿ.ಈರಪ್ಪ, ಸಂಪತ್​ಕುಮಾರ್, ಮದನಹಳ್ಳಿ ವೆಂಕಟೇಶ್, ಸುಬ್ಬಮ್ಮ, ರಾಜಮ್ಮ, ಕಮರ್​ತಾಜ್, ವಿಜಯಮ್ಮ, ಶ್ರೀಧರ್, ತಾಲೂಕು ಸಂಚಾಲಕ ಬೈರಕೂರು ವೆಂಕಟೇಶ್, ಸಂಘಟನಾ ಸಂಚಾಲಕ ಎಂ.ಪಾಪಣ್ಣ, ಎಂ.ಮಂಜುನಾಥ್, ಸಿ.ಗೋಪಾಲ್, ಎನ್.ವೆಂಕಟರಾಮ್ ವೆಂಕಟರಾಜ್, ಎಂ.ಎನ್.ಪರಮೇಶ್, ಕೃಷ್ಣಪ್ಪ, ಪಿ.ನಂಜುಂಡಪ್ಪ, ಸುಬ್ರಮಣಿ, ಸೀನಪ್ಪ, ನಾರಾಯಣಸ್ವಾಮಿ, ನಲ್ಲಪ್ಪ ಇದ್ದರು.