ಅಂಬರೀಷ್ ಅಂತಿಮ ಯಾತ್ರೆ ಸವಾಲಾಗಿತ್ತು: ನಿರ್ಗಮಿತ ಪೊಲೀಸ್ ಆಯುಕ್ತ ಸುನೀಲ್​ಕುಮಾರ್ ಅಭಿಮತ

ಬೆಂಗಳೂರು: ಪೊಲೀಸ್ ಆಯುಕ್ತರಾಗಿ 2 ವರ್ಷ ಸೇವೆ ಸಲ್ಲಿಸಿರುವುದು ಖುಷಿ ತಂದಿದೆ. ಈ ವೇಳೆ ಹಿರಿಯ ನಟ ಅಂಬರೀಷ್ ಅಂತಿಮ ಯಾತ್ರೆ ಸವಾಲಿನದ್ದಾಗಿತ್ತು ಎಂದು ನಿರ್ಗಮಿತ ಕಮಿಷನರ್ ಟಿ. ಸುನೀಲ್​ಕುಮಾರ್ ತಿಳಿಸಿದ್ದಾರೆ.

ಅಂಬರೀಷ್ ಅಂತಿಮ ಯಾತ್ರೆಯನ್ನು ಕಂಠೀರವ ಸ್ಟೇಡಿಯಂನಿಂದ ಕಂಠೀವ ಸ್ಟುಡಿಯೋವರೆಗೂ ನಡೆಸುವುದು ಸವಾಲಿನ ಕೆಲಸವಾಗಿತ್ತು. ಆದರೆ, ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಸಹಕಾರದಿಂದ ಶಾಂತಿಯುತವಾಗಿ ನಡೆಯಿತು ಎಂದು ಹೇಳಿದರು.

ಕೊಲಂಬಿಯಾದಿಂದ ಬಂದಿದ್ದ ಮನೆಗಳ್ಳರು, ಹೊರರಾಜ್ಯ ಸರಗಳ್ಳರನ್ನು ಮಟ್ಟ ಹಾಕಿದೆ. ಆದರೆ, ಕೇಂದ್ರ ಸರ್ಕಾರದ ಸ್ಮಾರ್ಟ್ ಪೊಲೀಸಿಂಗ್ ಯೋಜನೆ ಜಾರಿಗೆ ತರಲು ಸಾಧ್ಯವಾಗದಿರುವುದು ನೋವಿನ ಸಂಗತಿಯಾಗಿದೆ ಎಂದು ಸುನೀಲ್​ಕುಮಾರ್ ಹೇಳಿದರು.

ಎಲ್ಲ ಕಾರ್ಯದಲ್ಲಿ ಕುಟುಂಬದಂತೆ ಸಹಕಾರ ನೀಡಿದ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಅರ್ಪಿಸಿದರು. ಹೊಸ ಆಯುಕ್ತ ಅಲೋಕ್ ಕುಮಾರ್ ಅವರಿಗೂ ಸಹಕಾರ ನೀಡುವಂತೆ ಮನವಿ ಮಾಡಿದರು.

Leave a Reply

Your email address will not be published. Required fields are marked *