ಅಂತಿಮ ಸುತ್ತಿಗೆ ದೀಪಾ ಕರ್ಮಾಕರ್

ಬಾಕು (ಅಜೆರ್​ಬೈಜಾನ್): ಭಾರತದ ದೀಪಾ ಕರ್ವಕರ್, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವಿಶ್ವಕಪ್​ನ ಅರ್ಹತಾ ಸುತ್ತಿನ ವಾಲ್ಟ್ ವಿಭಾಗದಲ್ಲಿ ಅಂತಿಮ ಸುತ್ತಿಗೇರಿದ್ದಾರೆ. ಗುರುವಾರ ನಡೆದ 3ನೇ ಸುತ್ತಿನ ಸ್ಪರ್ಧೆಯಲ್ಲಿ 25 ವರ್ಷದ ದೀಪಾ, ಇದೇ ವಿಭಾಗದಲ್ಲಿ 2016ರ ರಿಯೋ ಒಲಿಂಪಿಕ್ಸ್​ನಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದರು. ಆರಂಭಿಕ ಎರಡೂ ಸುತ್ತಿನಲ್ಲಿ 14.466 ಹಾಗೂ 14.133 ಅಂಕ ಕಲೆಹಾಕಿದ್ದ ದೀಪಾ, ಸರಾಸರಿ 14.299 ಅಂಕ ಪಡೆದರು. ಅರ್ಹತಾ ಸುತ್ತಿನಲ್ಲಿ ಅಗ್ರ 8 ಸ್ಥಾನ ಪಡೆಯುವ ಸ್ಪರ್ಧಿಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ. ವಾಲ್ಟ್ ವಿಭಾಗದ ಅಂತಿಮ ಸುತ್ತಿನ ಸ್ಪರ್ಧೆ ಶನಿವಾರ ನಡೆಯಲಿದೆ. ದೀಪಾ ಶುಕ್ರವಾರ ನಡೆಯಲಿರುವ ಬ್ಯಾಲೆನ್ಸ್ ಬೀಮ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.