ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ

blank

ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ತಮ್ಮ ಪರಮಾಪ್ತ, ಮಾಜಿ ಶಾಸಕ ಹಾಗೂ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಪಟ್ಟಣದಲ್ಲಿ ಶ್ರೀ ಮಹದೇಶ್ವರ ಕಾಲೇಜು ಮೈದಾನದ ಸಮೀಪದಲ್ಲಿರುವ ಅನುಗ್ರಹ ನಿಲಯದಲ್ಲಿ ಎಸ್.ಜಯಣ್ಣ ಅವರ ಪಾರ್ಥಿವ ಶರೀರ ಇಡಲಾಗಿತ್ತು. ಗಣ್ಯರಿಗೆ ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಮಧಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪಾರ್ಥಿವ ಶರೀರ‌್ಕಕೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಜಿಲ್ಲಾ ಪೊಲೀಸ್ ವತಿಯಿಂದ ಸರ್ಕಾರಿ ಗೌರವ ವಂದನೆ ಸಲ್ಲಿಸಲಾಯಿತು. ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಡಾ.ಯತೀಂದ್ರ ಸಿದ್ದರಾಮಯ್ಯ, ಆರ್.ನರೇಂದ್ರ ಇದ್ದರು.
ಅಂತಿಮ ದರ್ಶನ ಪಡೆದ ಗಣ್ಯರು:
ಶಾಸಕರಾದ ಸಿ.ಎಸ್.ಪುಟ್ಟರಂಗಶೆಟ್ಟಿ, ಎಂ.ಆರ್.ಮಂಜುನಾಥ್, ಎಚ್.ಗಣೇಶ್ ಪ್ರಸಾದ್, ಪಿ.ಎಂ.ನರೇಂದ್ರಸ್ವಾಮಿ, ದರ್ಶನ್ ಧ್ರುವನಾರಾಯಣ, ಅನಿಲ್ ಚಿಕ್ಕಮಾದು, ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಸೋಮಶೇಖರ್, ಹರ್ಷವರ್ಧನ್, ಅಶ್ವಿನ್‌ಕುಮಾರ್, ಮಾಜಿ ಸಂಸದ ಕೋಟೆ ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಗ್ಯಾರಂಟಿ ಯೋ ಜನೆಗಳ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್.
ಪಾರ್ಥೀವ ಶರೀರದ ಮೆರವಣಿಗೆ:
ಗಣ್ಯರು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದ ನಂತರ ಪಾರ್ಥಿವ ಶರೀರವನ್ನು ಅನುಗ್ರಹ ನಿವಾಸದಿಂದ ಐಬಿ ವೃತ್ತ, ಅಂಬೇಡ್ಕರ್ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಅಚ್ಗಾಳ್ ವೃತ್ತ, ಬಾಪುನಗರ, ಮುಡಿಗುಂಡ, ಉತ್ತಂಬಳ್ಳಿ ಹಾಗೂ ಮಾಂಬಳ್ಳಿ ಗ್ರಾಮದವರೆಗೆ ಸಾಗಿತು.
ಎಸ್.ಜಯಣ್ಣ ಸೌಮ್ಯ ಸ್ವಭಾವದ, ಬದ್ಧತೆಯುಳ್ಳ ರಾಜಕಾರಣಿಯಾಗಿದ್ದರು. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಒಂದೇ ರೀತಿಯಲ್ಲಿ ಇರುತ್ತಿದ್ದರು. ವೈಯಕ್ತಿಕವಾಗಿ ಒಬ್ಬ ಹಿತೈಷಿ, ಆಪ್ತ, ಸ್ನೇಹಿತನನ್ನು ಕಳೆದುಕೊಂಡು ದುಃಖಿತನಾಗಿದ್ದೇನೆ.
ಡಾ.ಎಚ್.ಸಿ.ಮಹದೇವಪ್ಪ, ಸಚಿವ
ಎಸ್.ಜಯಣ್ಣ ಅವರು ರಾಜಕಾರಣದಲ್ಲಿ ಹಿರಿಯ ನಾಯಕರಾಗಿದ್ದರು. ನನ್ನ ತಂದೆಯೊಂದಿಗೆ ಉತ್ತಮ ಒಡನಾಟವಿತ್ತು. ಲೋಕಸಭೆ ಚುನಾವಣೆಯಲ್ಲಿ ನನಗೆ ಮಾರ್ಗದರ್ಶನ ನೀಡಿದ್ದರು. ನನ್ನ ಗೆಲುವಿಗೆ ಶ್ರಮಿಸಿದ್ದರು. ವಿರೋಧಿಗಳನ್ನು ಪ್ರೀತಿಸುತ್ತಿದ್ದ ವ್ಯಕ್ತಿತ್ವ ಅವರದ್ದು. ಜಯಣ್ಣರ ಅಗಲಿಕೆ ನಮ್ಮ ಪಕ್ಷಕ್ಕೆ ಅನಾಥ ಭಾವನೆ ಮೂಡಿಸಿದೆ.
ಸುನೀಲ್ ಬೋಸ್, ಸಂಸದ
ಎಆರ್‌ಕೆ ಭಾವುಕ
ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಭಾವುಕರಾದರು. ಸಿದ್ದರಾಮಯ್ಯ ಅವರ ಮಾತಿನಂತೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ನಾನು ಬಂದೆ. ಈ ವೇಳೆ ಜಯಣ್ಣ ಅನಾರೋಗ್ಯಕ್ಕೀಡಾಗಿದ್ದರು. 2018ರಲ್ಲಿ ಕೊಳ್ಳೇಗಾಲ ಟಿಕೆಟ್ ದೊರೆಯಿತು. ಈ ಸಂದರ್ಭ ಜಯಣ್ಣ ಅವರು ನಾನೇ ನಿಲ್ಲುತ್ತೇನೆ ಅಂದಿದ್ದರೆ, ನನಗೆ ಅವಕಾಶವಿರಲಿಲ್ಲ. ಆದರೆ, ತ್ಯಾಗಮಯಿಯಾಗಿ ನನಗೆ ನಿಲ್ಲಲು ಒಪ್ಪಿಗೆ ನೀಡಿದರು. 2023ರ ಚುನಾವಣೆಯಲ್ಲೂ ಗೊಂದಲದ ನಡುವೆ ಟಿಕೆಟ್ ದೊರೆಯಿತು. ಆಗಲೂ ಜಯಣ್ಣ ನನ್ನೊಟ್ಟಿಗಿದ್ದು ಕೆಲಸ ಮಾಡಿ ಗೆಲುವಿಗೆ ಕಾರಣರಾದರು. ನನಗೆ ಅವರು ಪ್ರೀತಿಯ ಅಣ್ಣ, ನಾನು ಅವರನ್ನು ಬಿಗ್ ಬ್ರದರ್ ಎನ್ನುತ್ತಿದೆ ಎಂದು ಕಣ್ಣೀರಿಟ್ಟರು.

Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…