blank

ಅಂತಾರಾಷ್ಟ್ರೀಯ ಕುಸ್ತಿಯಲ್ಲಿ ಸಿಖಂದರ್ ಶೇಖ್‌ಗೆ ಗೆಲುವು

blank

ಬೈಲಹೊಂಗಲ, ಬೆಳಗಾವಿ: ಪಟ್ಟಣದ ಐತಿಹಾಸಿಕ ಶ್ರೀ ಮರಡಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹೊನಲು-ಬೆಳಕಿನ ಬಯಲು ಕಣದ ಭಾರಿ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿ ಜರುಗಿದವು. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳು, ಕುಸ್ತಿ ಪ್ರೇಮಿಗಳನ್ನು ರಂಜಿಸಿದರು.

blank

ಡಾ.ವಿಶ್ವನಾಥ ಪಾಟೀಲ ಗೆಳೆಯರ ಬಳಗ, ಕ್ರೀಡಾ ಮತ್ತು ಕಲಾ ವೇದಿಕೆಯ ಆಶ್ರಯದಲ್ಲಿ ಕುಸ್ತಿ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಅಂತಾರಾಷ್ಟ್ರೀಯ ಪಂದ್ಯದಲ್ಲಿ, ಜಾರ್ಜಿಯಾ ದೇಶದ ಪೈಲ್ವಾನ್ ಟ್ಯಾಡೋರ್ ಅವರೊಂದಿಗೆ ಭಾರತದ ಕುಸ್ತಿ ಪಟು, ಸೊಲ್ಲಾಪುರದ ಸಿಖಂದರ್ ಶೇಖ್ ತಮ್ಮ ಡಾವ್ ಪೇಚ್ ಮೂಲಕ ಗೆಲುವು ಸಾಧಿಸಿದರು. ಕೊಲ್ಲಾಪುರದ ಸಂಜು ಇಂಗಳಗಿ ಜತೆ ಸೆಣೆಸಿದ ಬೆಳಗಾವಿ ತಾಲೀಮಿನ ಪವನ ಚಿಕ್ಕದಿನ್ನಿಕೊಪ್ಪ ಗೆಲುವಿನ ನಗೆ ಬೀರಿದರು.

ಶ್ರೀ ವರ್ತಿಸಿದ್ದಬಸವೇಶ್ವರ ಸಹಕಾರಿ ಸೊಸೈಟಿ ಆಶ್ರಯದಲ್ಲಿ ಬಿ.ಎಂ. ಕುಡಸೋಮಣ್ಣವರ, ಗಂಗಪ್ಪಣ್ಣ ಬೋಳಣ್ಣವರ ನೇತತ್ವದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಹರಿಯಾಣದ ಆಲ್ ಇಂಡಿಯಾ ಯುನಿವರ್ಸಿಟಿ ಚಾಂಪಿಯನ್ ವಿಕ್ರಾಂತ ಕುಮಾರನನ್ನು ದಾವಣಗೆರೆಯ ಮೈಸೂರು ದಸರಾ ಕೇಸರಿ ೈಲಾನ್ ಕಾರ್ತಿಕ ಕಾಟೆ ಡೊಂಕಿ ಡಾವ್ ಮೂಲಕ ಗೆಲುವಿನ ನಗೆ ಬೀರಿದರು. ಕರ್ನಾಟಕ ಕೇಸರಿ ನಾಗರಾಜ ಬಸಿಡೋನಿ ಹರಿಯಾಣ ಚಾಂಪಿಯನ್ ರಿಂಕುಕುಮಾರ ಅವರನ್ನು ಸೋಲಿಸಿದರು. ಕೊಲ್ಲಾಪುರದ ಋಷಿಕೇಶ ಪಾಟೀಲ, ಮಹಾರಾಷ್ಟ್ರ ಚಾಂಪಿಯನ್ ರೂಪೇಶ ಇಚಲಕರಂಜಿ ಅವರನ್ನು ಸೋಲಿಸಿದರು. ಕೊಲ್ಲಾಪುರದ ಸೌರಭ, ಇಚಲಕರಂಜಿ ಗಣೇಶ ಕುಸ್ತಿ ಸಮಬಲಗೊಂಡಿತು. ಬೈಲಹೊಂಗಲದ ಸೂರಜ ಮೂಗಿ, ನಂಜನಗೂಡಿನ ಪೈಲ್ವಾನ್ ರವಿಚಂದ್ರನಗೆ ಸೋಲಿನ ರುಚಿ ತೋರಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದರು. ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಮಾನಿ ಬಳಗದ ಆಶ್ರಯದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಂಗಲಿಯ ಸುದೇಶ ಠಾಕೋರ ಪಂಜಾಬದ ಸುಮೀತ ಮಲಿಕ್ ಅವರನ್ನು ಸೋಲಿಸಿದರು. ಜಾತ್ರಾ ಕಮಿಟಿಯಿಂದ ಕುಸ್ತಿಗಳು ಜರುಗಿದವು.

ಶಾಸಕ ಮಹಾಂತೇಶ ಕೌಜಲಗಿ, ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಾಬು ಕುಡಸೋಮಣ್ಣವರ, ಡಾ.ಮಹಾಂತಯ್ಯಶಾಸಿ ಆರಾದ್ರಿಮಠ, ಸಣ್ಣಬಸಪ್ಪ ಕುಡಸೋಮಣ್ಣವರ, ಜಗದೀಶ ಕೊತಂಬ್ರಿ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ರಾಮಲಿಂಗ ಕುಡಸೋಮಣ್ಣವರ, ಗುರು ಮೆಟಗುಡ್ಡ, ಅಮಿತ ಪಾಟೀಲ, ಶಿವಾನಂದ ಬೆಳಗಾಂವಿ ಶಂಕರೆಪ್ಪ ತುರಮರಿ, ಅಬ್ದುಲ್‌ರಹೆಮಾನ್ ನಂದಗಡ, ಮಲ್ಲಿಕಾರ್ಜುನ ಮೊರಬದ, ಶಿವಬಸ್ಸು ಕುಡಸೋಮಣ್ಣವರ, ಸುನೀಲ ವಳಸಂಗ, ಎ್.ಎಸ್. ಸಿದ್ದನಗೌಡರ, ಮಹೇಶ ಹರಕುಣಿ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು.

Share This Article
blank

ರಸ್ತೆಯಲ್ಲಿ ಬಿದ್ದಿರುವ ಇಂತಹ ವಸ್ತುಗಳನ್ನು ದಾಟಿದ್ರೆ ಕೆಟ್ಟ ಸಮಯ ಆರಂಭವಾಗುತ್ತಂತೆ!: ಏನೀ ವಸ್ತುಗಳು ತಿಳಿಯಿರಿ.. | Vastu

Vastu : ರಸ್ತೆಯಲ್ಲಿ ಹಾಗಾಗ ವಿಚಿತ್ರ ವಸ್ತುಗಳು ಬಿದ್ದಿರುವುದನ್ನು ನಾವು ಗಮನಿಸುತ್ತೇವೆ. ಈ ವಸ್ತುಗಳ ಬಗ್ಗೆ…

ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ ಹೃದಯಾಘಾತಗಳು ಹೆಚ್ಚಾಗಿ ಸಂಭವಿಸುತ್ತವೆ! ಯಾಕೆ ಗೊತ್ತಾ? heart attacks

heart attacks: ಪ್ರಪಂಚದಾದ್ಯಂತ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಬೆಳಿಗ್ಗೆ 6 ರಿಂದ ಮಧ್ಯಾಹ್ನ 12…

blank