ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಬೆಳೆದ ಹಾದಿಯಲ್ಲಿ ಅವರ ಹೆಸರಿನ ವಿವಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸಿದೆ. ಆ ನಿಟ್ಟಿನಲ್ಲಿ ವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಕೇಂದ್ರ ಆರಂಭಿಸುವ ಚಿಂತನೆ ಇದೆ ಎಂದು ನೂತನ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಹೇಳಿದರು.

ಕುಲಪತಿಯಾಗಿ 4 ವರ್ಷ ಎಂಜಾಯ್ ಮಾಡಲು ಬಂದಿಲ್ಲ. ಗ್ರಾಮೀಣ ಭಾಗದ ಬಡ, ನಿರ್ಗತಿಕ, ಅಸಹಾಯಕರ ಏಳಿಗೆಗೆ ತಂಡವಾಗಿ ವಿವಿ ವಿದ್ಯಾರ್ಥಿಗಳ ಕನಸುಗಳಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೌಶಲ ಅಭಿವೃದ್ಧಿ, ಜಾನಪದ ಅಧ್ಯಯನ, ಮಹಿಳಾ ಸಬಲೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ವಿಭಾಗ ಒಳಗೊಂಡಂತೆ ಮಲೆನಾಡು ಸಂಸ್ಕೃತಿಗೆ ಹೊಂದಿಕೊಳ್ಳುವ ಒಂದೆರಡು ಹೊಸ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್​ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕುಲಪತಿಗಳ ಜವಾಬ್ದಾರಿ ಹೆಚ್ಚಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವ ಒತ್ತಡವಿದೆ. ವಿಶ್ವ ಹಾಗೂ ದೇಶದ ಹಲವು ವಿವಿಗಳಿಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಅನುಭವವನ್ನು ಬಳಸಿಕೊಳ್ಳಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿ 2018ರ ಕುರಿತು ವಿವಿಯಲ್ಲಿ ಕಾರ್ಯಾಗಾರ ಆಯೋಜಿಸಲಿದ್ದು, ದಿನದ 24 ಗಂಟೆಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಲು ಬದ್ಧ ಎಂದರು.

ಬಿಎ ಕೋರ್ಸ್​ಗಳನ್ನು ಜಾಬ್ ಓರಿಯಂಟೆಡ್ ಆಗಿ ಬೆಳೆಸಬೇಕಿದೆ. ವಿವಿಯಲ್ಲಿ ಆ ರೀತಿಯಾಗಿ ಬಿಎ ಕೋರ್ಸ್​ನ್ನು ಪರಿಚಯಿಸುವ ಅವಶ್ಯಕತೆ ಇದೆ ಎಂದರು.

ಹೊಸ ಸರ್ಟಿಫಿಕೇಟ್ ಕೋರ್ಸ್: ಕೌಶಲ ಅಭಿವೃದ್ಧಿ, ಜಾನಪದ ಅಧ್ಯಯನ, ಮಹಿಳಾ ಸಬಲೀಕರಣ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ವಿಭಾಗ ಒಳಗೊಂಡಂತೆ ಮಲೆನಾಡು ಸಂಸ್ಕೃತಿಗೆ ಹೊಂದಿಕೊಳ್ಳುವ ಒಂದೆರಡು ಹೊಸ ಡಿಪ್ಲೊಮಾ, ಸರ್ಟಿಫಿಕೇಟ್ ಕೋರ್ಸ್ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಕುಲಪತಿ ತಿಳಿಸಿದರು.

ಮುಂಬರುವ ವರ್ಷ ಶುಲ್ಕ ಕಡಿತ: ವಿವಿಯ ಪ್ರವೇಶ ಶುಲ್ಕ ಹೆಚ್ಚಾಗಿರುವ ಬಗ್ಗೆ ವಿದ್ಯಾರ್ಥಿ ಮತ್ತು ಪಾಲಕರು ದೂರು ನೀಡುತ್ತಿದ್ದಾರೆ. ಶುಲ್ಕ ಕಡಿಮೆಗೊಳಿಸುವ ಬಗ್ಗೆ ಚಿಂತಿಸಲಾಗುತ್ತಿದೆ. ಆದರೆ ಪ್ರಸಕ್ತ ವರ್ಷದಿಂದ ಶುಲ್ಕ ಕಡಿಮೆ ಮಾಡಲು ಸಾಧ್ಯವಿಲ್ಲ. ಮುಂಬರುವ ವರ್ಷಗಳಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರೊ. ಬಿ.ಪಿ. ವೀರಭದ್ರಪ್ಪ ಹೇಳಿದರು.

ನಿರ್ವಹಣಾ ಅಭಿವೃದ್ಧಿ ಎಲ್ಲ ಸೇರಿ ವಿವಿಗೆ ವರ್ಷಕ್ಕೆ 80 ಕೋಟಿ ರೂ. ಅಗತ್ಯವಿದೆ. ಆದರೆ ಸರ್ಕಾರದಿಂದ 56 ಕೋಟಿ ರೂ. ಅನುದಾನ ಬರುತ್ತಿದೆ. ವಿವಿಯಲ್ಲಿ ವಿದ್ಯಾರ್ಥಿಗಳ ಶುಲ್ಕ ಸೇರಿ 1.50 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಹಾಗಾಗಿ ವಿವಿಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಿದೆ ಎಂದರು.

ಕುಲಸಚಿವ ಪ್ರೊ. ಎಚ್.ಎಸ್.ಭೋಜ್ಯಾನಾಯ್್ಕ ಪರಿಕ್ಷಾಂಗ ಕುಲಸಚಿವ ರಾಜಾನಾಯ್್ಕ ಹಣಕಾಸು ಅಧಿಕಾರಿ ಪ್ರೊ. ಹಿರೇಮಣಿನಾಯ್ಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಆರ್.ಸತ್ಯಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.