ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇಂದಿನಿಂದ

blank

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವ ಹಾಗೂ ಕ್ಷಮತಾ ಸಂಸ್ಥೆ ಆಶ್ರಯದಲ್ಲಿ ನಗರ ಹೊರವಲಯದ ಕುಸುಗಲ್ ರಸ್ತೆಯ ಆಕ್ಸ್​ಫರ್ಡ್ ಕಾಲೇಜ್ ಪಕ್ಕದ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಜ. 20 ಮತ್ತು 21ರಂದು ಏರ್ಪಾಟಾಗಿದೆ.

ಜ. 20ರಂದು ಬೆಳಗ್ಗೆ 10 ಗಂಟೆಗೆ ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ್ ಉದ್ಘಾಟಿಸುವರು. ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ ಉಪಸ್ಥಿತರಿರುವರು.

ಚಿತ್ರ ಕಲಾವಿದ ವಿಲಾಸ ನಾಯಕ್ ಅವರಿಂದ ಸ್ಥಳದಲ್ಲಿಯೇ ‘ಸ್ಪೀಡ್ ಪೇಂಟಿಂಗ್’, ಮಹಿಳೆಯರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ, ಸಂಜೆ 6ಕ್ಕೆ ಗಾಯಕರಾದ ವಿಜಯ ಪ್ರಕಾಶ, ಅರ್ಚನಾ ಉಡುಪ ಮತ್ತು ತಂಡದಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಜ. 21ರಂದು ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಸಂಜೆ, ಒಂದೇ ಸೂರಿನಡಿ ವೈವಿಧ್ಯಮಯ ತಿಂಡಿ-ತಿನಿಸುಗಳ ಆಹಾರ ಉತ್ಸವವನ್ನು ಏರ್ಪಡಿಸಲಾಗಿದೆ. ಈ ಸಲ ಬಗೆ ಬಗೆಯ ಕೈಟ್ ಫ್ಲೈಯರ್ಸ್​ಗಳು ದೇಶ ವಿದೇಶಗಳಿಂದ ಆಗಮಿಸಲಿದ್ದಾರೆ. ಡ್ರ್ಯಾಗನ್ ಪತಂಗದ ತೂಕ 15 ಕೆಜಿ ಇದೆ. ಆದರೆ, ಆಕಾಶದಲ್ಲಿ ಹಾರಾಡಿದರೆ 150 ಕೆಜಿ ಹೆಚ್ಚುತ್ತದೆ. ಲಂಡನ್, ಇಂಗ್ಲೆಂಡ್, ಅಮೆರಿಕ, ಫ್ರಾನ್ಸ್ ಸೇರಿ ಒಟ್ಟು 15 ದೇಶಗಳಿಂದ ಸುಮಾರು 25 ಕೈಟ್ ಫ್ಲೈಯರ್ಸ್​ಗಳು ಹಾಗೂ 23 ಆಟಗಾರರು ಭಾಗವಹಿಸಲಿದ್ದಾರೆ. ರಾತ್ರಿ ವಿವಿಧ ವಿನ್ಯಾಸದ ಗಾಳಿಪಟಗಳು ಬಾನಲ್ಲಿ ಜುಗಲ್​ಬಂದಿ ನಡೆಸಲಿವೆ.

Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…