More

    ಅಂತಾರಾಜ್ಯ ಮನೆಗಳ್ಳನ ಬಂಧನ

    ಹುಬ್ಬಳ್ಳಿ: ತೆಲಂಗಾಣ ಪೊಲೀಸರ ಸಹಾಯದಿಂದ ಇಲ್ಲಿನ ಗೋಕುಲ ರೋಡ್ ಠಾಣೆ ಪೊಲೀಸರು ಕುಖ್ಯಾತ ಅಂತಾರಾಜ್ಯ ಮನೆಗಳ್ಳನನ್ನು ಬಂಧಿಸಿದ್ದು, ಆತನಿಂದ 26,13,634 ರೂ. ಮೌಲ್ಯದ 900 ಗ್ರಾಂ ಚಿನ್ನಾಭರಣ ಹಾಗೂ 7 ಕೆಜಿ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯ ಪೂರ್ವ ಗೋದಾವರಿ ಜಿಲ್ಲೆ ರಾವುಲಪಲಂ ಗ್ರಾಮದ ದ್ವಾರಂಪುಡಿ ವೆಂಕಟೇಶ್ವರ ರೆಡ್ಡಿ ಕೃಷ್ಣಾರೆಡ್ಡಿ (28) ಬಂಧಿತ ಆರೋಪಿ. ಈತನ ಸಹಚರ ಹೈದರಾಬಾದ್ ಮೂಲದ ನಂದೀಪಲ್ಲಿ ವೆಂಕಟವಿನಯ ತಲೆಮರೆಸಿಕೊಂಡಿದ್ದಾನೆ. ಇಲ್ಲಿನ ಲಕ್ಷ್ಮೀನಗರ, 10ನೇ ಅವೆನ್ಯೂ, ಶ್ರೇಯಾನಗರ, ವಿನಾಯಕ ನಗರದಲ್ಲಿ 2019ರಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಗಳ ತನಿಖೆ ವೇಳೆ ತೆಲಂಗಾಣದ ಕಮ್ಮಂ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸಲಾಗಿದೆ. ಇನ್ಸ್​ಪೆಕ್ಟರ್ ನಾಗರಾಜ ಕಮ್ಮಾರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಕಾರ್ಯಾಚರಣೆಯಲ್ಲಿ ಎಎಸ್​ಐ ಎಸ್.ಎಚ್.

    ಪಾಟೀಲ, ಎನ್.ಐ ನೀಲಗಾರ, ಆರ್.ಆರ್. ಹೊಂಕಣದವರ, ಎಸ್.ಎಂ. ಕುರಹಟ್ಟಿ, ಎಂ.ಸಿ. ಹೊನ್ನಪ್ಪನವರ, ಬಿ.ಎಫ್. ಬೆಳಗಾವಿ, ಎಂ.ಎಸ್. ಚಿಕ್ಕಮಠ, ಆರ್.ಕೆ. ಬಡಂಕರ, ಎ.ಎಚ್ ಹುಗ್ಗಿ, ಸಂಜೀವ ಕಣಬೂರ, ಶಿವಾನಂದ ಹೆಬಸೂರ, ಮಂಜುನಾಥ ಕಾಮಧೇನು, ರಮೇಶ ಕೋತಂಬ್ರಿ ತಂಡದಲ್ಲಿದ್ದರು. ಈ ತಂಡಕ್ಕೆ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts