ಅಂತಾರಾಜ್ಯ ಬಸ್ ಸಂಚಾರ ಪುನಾರಂಭ

ಚಾಮರಾಜನಗರ : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ನಿಧನರಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತಾರಾಜ್ಯ ಬಸ್ ಸಂಚಾರ ಗುರುವಾರ ಮುಂಜಾನೆ ಪುನಾರಂಭಗೊಂಡಿತು.

ಚಾಮರಾಜನಗರ ತಾಲೂಕಿನ ಗಡಿಭಾಗದಲ್ಲಿರುವ ಪುಣಜನೂರು, ತಾಳವಾಡಿ, ಗುಂಡ್ಲುಪೇಟೆ ತಾಲೂಕಿನ ಕೆಕ್ಕನಹಳ್ಳ, ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿನ ಪಾಲಾರ್, ಅರ್ಧನಾರಿಪುರ, ಬೈಲೂರು ಗಡಿಗಳ ಮೂಲಕ ತಮಿಳುನಾಡಿಗೆ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ ಹಾಗೂ ವಾಹನಗಳು ಸಂಚರಿಸಿದವು.

ನಂಜನಗೂಡು ಡಿಪೋದಿಂದ 5, ಚಾಮರಾಜನಗರ ಸಾರಿಗೆ ಡಿಪೋದಿಂದ 2, ಗುಂಡ್ಲುಪೇಟೆ ಡಿಪೋದಿಂದ 3 ಸೇರಿ ಇತರೆ ಜಿಲ್ಲೆಗಳ 36 ಕೆಎಸ್ಸಾರ್ಟಿಸಿ ಬಸ್‌ಗಳು ಜಿಲ್ಲೆಯ ಮೂಲಕ ತಮಿಳುನಾಡಿನ ನಗರ ಮತ್ತು ಪಟ್ಟಣಗಳಿಗೆ ಸಂಚರಿಸಿದವು ಎಂದು ಚಾಮರಾಜನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಆರ್.ಅಶೋಕ್‌ಕುಮಾರ್ ವಿಜಯವಾಣಿಗೆ ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಗಡಿಗಳಲ್ಲಿ ನಿಯೋಜಿಸಲಾಗಿದ್ದ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಹಿಂಪಡೆಯಲಾಗಿದೆ.

Leave a Reply

Your email address will not be published. Required fields are marked *