ಅಂತರ್ಜಾಲ ಮಾಯಜಾಲವಾಗಿ ಪರಿವರ್ತನೆ

blank

ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ದಿನ ನಿತ್ಯ ಜೀವನದಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡೆ ತಮ್ಮ ಎಲ್ಲಾ ಕೆಲಸವನ್ನು ಕುಳಿತ ಜಾಗದಲ್ಲೇ ಮಾಡುತ್ತಿದ್ದಾರೆ. ಆದರೆ ಈ ಅಂತರ್ಜಾಲ ಜನರನ್ನು ಮೋಸದ ಬಲೆಗೆ ಬೀಳಿಸುವ ಮಾಯಜಾಲವಾಗಿ ಪರಿವರ್ತನೆಯಾಗಿದೆ ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಆತಂಕ ವ್ಯಕ್ತಪಡಿಸಿದರು.

blank

ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಯುವ ಜನತೆಯಂತೂ ಪ್ರತಿಕ್ಷಣವೂ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಇಂದು ಪ್ರತಿಯೊಬ್ಬರೂ ಸ್ಮಾರ್ಟ್ಫೋನ್ ಹೊಂದಿದ್ದು, ಇಂಟರ್‌ನೆಟ್ ಕೂಡಾ ಬಳಸುತ್ತಿದ್ದಾರೆ. ಆದರೆ ಇಂಟರ್‌ನೆಟ್ ಬಳಸುವ ಪ್ರತಿಯೊಬ್ಬರಿಗೂ ಸುರಕ್ಷತೆಯ ಅಂತರ್ಜಾಲ ಬಳಕೆಯ ಕುರಿತು ತಿಳಿದಿರುವುದಿಲ್ಲ. ಈ ಪ್ರಭಾವಿ ಅಂತರ್ಜಾಲ ಪ್ರಪಂಚ ಮಕ್ಕಳಿಂದ ಹಿಡಿದು ಹಿರಿಯರವರೆಗೂ ವ್ಯಾಪಿಸಿದೆ. ಸದ್ಯ ಕಚೇರಿ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುವ ಪರಿಣತಿಯನ್ನು ಹೊಂದಿದ ಬಳಕೆದಾರರು ಅನೇಕರಿದ್ದಾರೆ. ಅಷ್ಟರ ಮಟ್ಟಿಗೆ ಇಂಟರ್‌ನೆಟ್ ಬಳಕೆ ಮತ್ತು ಅದರ ಉಪಯೋಗವಾಗುತ್ತಿದೆ. ಆದರೆ ಇಷ್ಟೆಲ್ಲಾ ಪ್ರಯೋಜನ ಒದಗಿಸುವ ಇಂಟರ್‌ನೆಟ್‌ನಿAದ ತೊಂದರೆಯೂ ಇದೆ ಎಂದು ಹೇಳಿದರು.
ಪೇಜ್‌ಗಳಿಂದ ಯಾವುದೇ ಆ್ಯಪ್‌ಗಳನ್ನು ಡೌನಲೋಡ್ ಮಾಡಿಕೊಳ್ಳಬಾರದು. ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ. ಆಂಡ್ರಾಯ್ಡ್ ಸ್ಮಾರ್ಟ್ಫೋನ್‌ಗಳಿಗೆ ಅಸುರಕ್ಷಿತ ಆ್ಯಪ್‌ಗಳಿಂದ ಅಪಾಯ ಸಾಧ್ಯತೆ ಹೆಚ್ಚು. ಆದ್ದರಿಂದ ಇಂಥ ಅಸುರಕ್ಷಿತ ಆ್ಯಪ್‌ಗಳನ್ನು ದೂರವಿಡಿ ಎಂದು ಸಲಹೆ ನೀಡಿದರು.
ಸುರಕ್ಷತೆಯ ಕುರಿತು ಪಾಲರು ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ. ಸೈಬರ್ ವಂಚಕರು ತಮ್ಮ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಮಕ್ಕಳನ್ನು ಪ್ರಚೋದಿಸಬಹುದು. ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ವಿಶೇಷÀವಾಗಿ ಅಪರಿಚಿತರಿಗೆ ಬಹಿರಂಗಪಡಿಸದAತೆ ಮಕ್ಕಳಿಗೆ ತಿಳಿಸಬೇಕು. ನಿಮ್ಮ ಮಕ್ಕಳಿಗೆ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ತಿಳಿದರೆ , ತಕ್ಷಣವೇ ನಿಮಗೆ ಹೇಳಲು ತಿಳಿಸಬೇಕು. ನಿಮ್ಮ ಸ್ಮಾರ್ಟ್ಫೋನ್‌ಗೆ ಪಾಸ್‌ವರ್ಡ್ ಸ್ಟಾçಂಗ್ ಆಗಿರಬೇಕು. ಫೇಸ್‌ಬುಕ್, ಯೂಟ್ಯೂಬ್, ಜಿ ಮೇಲ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅಕೌಂಟ್ ಸೇರಿದಂತೆ ನೀವು ಬಳಸುವ ಎಲ್ಲ ಸಾಮಾಜಿಕ ತಾಣಗಳಲ್ಲಿ ನಿಮ್ಮ ಮಾಹಿತಿ ಇರುತ್ತದೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕಠಿಣ ಪಾರ್ಸ್ವರ್ಡ್ ಇಡಬೇಕು. ಇದರಿಂದ ನಿಮ್ಮ ಅಂತರ್ಜಾಲ ಮಾಹಿತಿ ಸೋರಿಕೆ ತಡೆಯಬಹುದು ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಎನ್‌ಐಸಿಯ ಸೂಚನಾಧಿಕಾರಿ ಚಂದ್ರುಪ್ರಕಾಶ ಮಾತನಾಡಿ, ಆನ್‌ಲೈನ್ ಮತ್ತು ವಿಡಿಯೋ ಕರೆ ಮಾಡಿ. ಪೋಷÀಕರಿಗೆ ಅಥವಾ ಮಕ್ಕಳಿಗೆ ಡಿಜಿಟಲ್ ಬಂಧನವೆAದು ನಿಮ್ಮನ್ನು ಭಯಪಡಿಸಬಹುದು. ಅದರಿಂದ ಅಪರಿಚಿತ ಸಂಖ್ಯೆಯಿAದ ಕರೆಗಳು ಬಂದರೆ ನಿರ್ಲಕ್ಷಿಸಿ. ಯಾವುದಾದರು ಆ್ಯಪ್ ಅಥವಾ ವೆಬ್‌ಸೈಟ್ ಬಳಸಬೇಕಾದರೇ ಅವರು ನಿಮ್ಮ ಕಡೆಯಿಂದ ನಿಮ್ಮ ಕಾಂಟ್ಯಾಕ್ಟ್ö್ಸ, ಲೊಕೇಷನ್, ಕ್ಯಾಲೆಂಡರ್, ಕ್ಯಾಮೆರಾ ಹೀಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತಾರೆ. ಆಗ ಅನಗತ್ಯವಾಗಿ ಎಲ್ಲ ಡಾಟಾ ಮಾಹಿತಿ ಹಂಚಿಕೆಗೆ ಅನುಮತಿ ನೀಡಬೇಡಿ. ಇದರಿಂದ ನಿಮ್ಮ ವೈಯಕ್ತಿಕ ದಾಖಲೆಗಳು ಸೋರಿಕೆಯಾಗುತ್ತದೆ ಹಾಗೂ ವ್ಯಕ್ತಿಯ ಖಾಸಗಿ ಮಾಹಿತಿ, ಬ್ಯಾಂಕ್ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಕಾರ್ಯಗಾರದಲ್ಲಿ ಜಿಪಂ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಜ್‌ಗೋಪಾಲ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ನಯನ ಮತ್ತಿತರರಿದ್ದರು.

Share This Article

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…

ಬೇಸಿಗೆಯಲ್ಲಿ ಪಿತ್ತಕೋಶ ಸಮಸ್ಯೆ ಹೆಚ್ಚಳ

| ಪಂಕಜ ಕೆ.ಎಂ., ಬೆಂಗಳೂರು ಬಿಸಿಲ ಝುಳ ಹೆಚ್ಚಾಗಿದ್ದರೂ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವಲ್ಲಿ ವಿಫಲರಾಗುತ್ತಿರುವ ಜನರು…