ಅಂಜನಾಪುರ ಡ್ಯಾಂಗೆ ಬಿಎಸ್​ವೈ ಬಾಗಿನ

ಶಿಕಾರಿಪುರ: ನಿರಂತರ ಮಳೆಗೆ ಮೈದುಂಬಿಕೊಂಡಿರುವ ಅಂಜನಾಪುರ ಜಲಾಶಯಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಂಗಳವಾರ ಬಾಗಿನ ಅರ್ಪಿಸಿದರು.</p><p>ಬಳಿಕ ಜಲಾಶಯ ಪಕ್ಕದಲ್ಲಿರುವ ಉದ್ಯಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡರು. ನಂತರ ಕ್ಷೇತ್ರಾಧಿಪತಿ ಶಿಕಾರಿಪುರ ದ ಶ್ರೀಹುಚ್ಚರಾಯಸ್ವಾಮಿ ದರ್ಶನ ಹಾಗೂ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ವೃಂದಾವನದ ದರ್ಶನ ಪಡೆದರು. </p><p>ಮಾಳೇರಕೇರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಅಧಿಕಾರಿಗಳ ಬಳಿ ಪ್ರವಾಹದ ಮಾಹಿತಿ ಪಡೆದು ಪರಿಹಾರ ಕಾರ್ಯಗಳು, ಶಾಶ್ವತ ನೀರಾವರಿ ಯೋಜನೆ ಬಗ್ಗೆ ರ್ಚಚಿಸಿದರು. ನೆರೆ ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.</p><p>ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗುರುಮೂರ್ತಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ಕೊಳಗಿ ರೇವಣಪ್ಪ, ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್, ಜಿಲ್ಲಾಧಿಕಾರಿ ಶಿವಕುಮಾರ್, ತಹಸೀಲ್ದಾರ್ ಕವಿರಾಜ್, ಇಒ ಆನಂದಕುಮಾರ್, ತೇಜಸ್ವಿನಿ ರಾಘವೇಂದ್ರ, ಕೆ.ಎಸ್.ದತ್ತಾತ್ರಿ, ಸಿದ್ದಲಿಂಗಪ್ಪ, ಪರಶುರಾಮ ಇತರರಿದ್ದರು.</p>