ಚಿತ್ರದುರ್ಗ: ಪ್ರಧಾನ ಅಂಚೆ ಕಚೇರಿಯಲ್ಲಿ ಶನಿವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿವೃತ್ತ ನೌಕರರಿಗೆ ಪಿಂಚಣಿ ಮುಂದುವರಿಸುವ ಸಂಬಂಧ ಜೀವನ ಪ್ರಮಾಣ ಪತ್ರ ಉಚಿತ ಅಭಿಯಾನ ನಡೆಯಿತು.
ಬೆಂಗಳೂರಿನ ಕರ್ನಾಟಕ ಅಂಚೆ ಮತ್ತು ದೂರಸಂಪರ್ಕ ನಿವೃತ್ತ ನೌಕರರ ಸಂಘದಿಂದ ನಡೆದ ಅಭಿಯಾನಕ್ಕೆ ಮೈಸೂರಿನ ಅಂಚೆ ತರಬೇತಿ ಕೇಂದ್ರದ ನಿವೃತ್ತ ಉಪನಿರ್ದೇಶಕ ಎಸ್.ರಾಜಶೇಖರ್ ಚಾಲನೆ ನೀಡಿದರು.
44 ಮಂದಿ ನಿವೃತ್ತ ನೌಕರರು ವಿವಿಧ ದಾಖಲೆಗಳೊಂದಿಗೆ ಪ್ರಮಾಣ ಪತ್ರ ಸಲ್ಲಿಸಿದರು. ಸ್ವಯಂ ಸೇವಕರಾದ ಟೆಲಿಕಾಂನ ನಿವೃತ್ತ ಹಿರಿಯ ಲೆಕ್ಕ ಪರಿಶೋಧಕ ಪಿ.ಎಂ.ಕೊಟ್ರಬಸಪ್ಪ, ದಾವಣಗೆರೆಯ ನಿವೃತ್ತ ಉಪ ಅಂಚೆ ಪಾಲಕ (ಲೆಕ್ಕ) ಬಿ.ಟಿ.ಚಂದ್ರಶೇಖರ್, ಪ್ರಧಾನ ಅಂಚೆ ಕಚೇರಿಯ ಅಂಚೆ ಅಧೀಕ್ಷಕ ಕೆ.ದೇವರಾಜು, ನಿವೃತ್ತ ಅಂಚೆ ಸಹಾಯಕ ವೆಂಕಟಚಲಯ್ಯ ಇತರರಿದ್ದರು.