ಮೂಡಿಗೆರೆ: ರೈತರು ಜಮೀನಿನಲ್ಲಿ ಕೃಷಿಯೊಂದಿಗೆ ಹೈನುಗಾರಿಕೆ ನಡೆಸಲು ಉತ್ತಮ ಅವಕಾಶವಿದೆ. ಆದರೆ ಮಲೆನಾಡು ಭಾಗದ ರೈತರ ಹೈನುಗಾರಿಕೆಗೆ ಸೂಕ್ತ ಉತ್ತೇಜನ ಸಿಗದೆ ಅಂಗೈಯಲ್ಲಿ ಬೆಣ್ಣೆಯಿದ್ದರೂ ತುಪ್ಪ ಮಾಡಿಕೊಳ್ಳಲಾಗದ ಸ್ಥಿತಿ ರೈತರದ್ದು. ಹಾಲು ಖರೀದಿಗೆ ಡೇರಿ ಸ್ಥಾಪನೆಯಾದರೆ ರೈತರು ಕೃಷಿಯೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿ ಆರ್ಥಿಕಮಟ್ಟವೂ ಸುಧಾರಣೆಯಾಗಲಿದೆ.
ಮೂಡಿಗೆರೆ ತಾಲೂಕಿಗೆ ಹಾಸನದ ಡೇರಿಯಿಂದ ಪ್ರತಿದಿನ ಸಾಕಷ್ಟು ಹಾಲು ಮತ್ತು ಮೊಸರು ಪೂರೈಕೆಯಾಗುತ್ತದೆ. ಆದರೆ ತಾಲೂಕಿನಲ್ಲಿ ಕ್ಷೀರಪಥವಿಲ್ಲದ ಕಾರಣ ಸ್ಥಳೀಯವಾಗಿ ಹೈನುಗಾರಿಕೆ ನಡೆಸುವವರಿಗೆ ಪ್ರೋತ್ಸಾಹ ಸಿಗದಂತಾಗಿದೆ. ಈ ಭಾಗದಲ್ಲಿ ಕ್ಷೀರಪಥ ಸ್ಥಾಪನೆ ಮಾಡಬೇಕು ಎಂಬ ಕೂಗು ಎರಡು ದಶಕಗಳಿಂದ ರೈತ ವಲಯದಿಂದ ಕೇಳಿಬರುತ್ತಿದ್ದರೂ ಡೇರಿ ಸ್ಥಾಪಿಸದೆ ರೈತರು ಹೈನುಗಾರಿಕೆಯಿಂದ ದೂರ ಉಳಿಯುವಂತಾಗಿದೆ.
ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗೂ ಹೈನುಗಾರಿಕೆಗೂ ಅವಿನಾಭಾವ ಸಂಬಂಧವಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಹುತೇಕ ರೈತರು ಹೈನುಗಾರಿಕೆ ನಡೆಸಿ ಹಾಲು ಮಾರಾಟದಿಂದ ಜೀವನ ಸಾಗಿಸುತ್ತಿದ್ದಾರೆ. ಗೋಣಿಬೀಡು, ಚಂದ್ರಪುರ, ಮಣ್ಣಿಕೆರೆ, ಮರೆಬೈಲು, ಉಗ್ಗೆಹಳ್ಳಿ, ಉದುಸೆ, ನಂದಿಪುರ, ಮಾಕೋನಹಳ್ಳಿ, ಕೊಲ್ಲಿಬೈಲ್, ಬೀಜುವಳ್ಳಿ, ಕೃಷ್ಣಾಪುರ, ಬಿಳಗುಳ, ಬಿದರಹಳ್ಳಿ, ಬೆಟ್ಟಗೆರೆ, ದಾರದಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೈನುಗಾರಿಕೆ ಜೀವಂತವಾಗಿದೆ. ರೈತರು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಖಾಸಗಿ ಹಾಲು ಮಾರಾಟಗಾರರು ಗ್ರಾಮೀಣ ಭಾಗದ ರೈತರಿಂದ ಹಾಲು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಕೇಂದ್ರಗಳನ್ನು ತೆರೆದಿದ್ದಾರೆ.
ಅಂಗೈಯಲ್ಲಿ ಬೆಣ್ಣೆಯಿದ್ರೂ ತುಪ್ಪಕ್ಕೆ ಹುಡುಕಾಟ!

You Might Also Like
ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ತುಪ್ಪವನ್ನು ತಿನ್ನಲೇ ಬಾರದು ಗೊತ್ತಾ? ghee benefits and risks
ಬೆಂಗಳೂರು: ( ghee benefits and risks) ಹಾಲಿನ ಉತ್ಪನ್ನಗಳು ಆರೋಗ್ಯಕ್ಕೆ ಒಳ್ಳೆಯದು. ತುಪ್ಪ ಹಲವು…
ಬಿಸಿಲಿನ ವಾತಾವರಣದಲ್ಲಿ ನಿಮ್ಮ ಕಾರಿನೊಳಗೆ ತಂಪಾಗಿರಲು ಬಯಸುವಿರಾ? ಈ ಟ್ರಿಕ್ ಟ್ರೈ ಮಾಡಿ.. Summer Car Tips
ಬೆಂಗಳೂರು: (Summer Car Tips ) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಸಿಲಿಇಂದ ರಕ್ಷಣೆ ಪಡೆಯಲು…
ಹಠಾತ್ತನೆ ಮದ್ಯಪಾನ ತ್ಯಜಿಸುವುದರಿಂದ ಸಾಯ್ತಾರಾ? ಆಲ್ಕೋಹಾಲ್ ಬಿಡುವುದಾದ್ರೂ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ… | Alcohol
Alcohol: ಮದ್ಯಪಾನದಿಂದ ಉಂಟಾಗುವ ಸಾವುಗಳ ಕುರಿತು ಬ್ರಿಟನ್ನ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ(ONS) ಅಘತಕಾರಿ ಅಂಕಿ…